ಮೈಸೂರು

ಹಿರಿಯ ನಟ ದಿ.ತೂಗುದೀಪ ಶ್ರೀನಿವಾಸ್ ಪುಣ್ಯಸ್ಮರಣೆ

ಮೈಸೂರು,ಅ.16:- ಹಿರಿಯ ನಟ ದಿ.ತೂಗುದೀಪ ಶ್ರೀನಿವಾಸ್ ಅವರ 26ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ವತಿಯಿಂದ  ಲಲಿತಮಹಲ್ ಪ್ಯಾಲೇಸ್ ಬಳಿ ಇರುವ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ  ಸ್ಮರಿಸಲಾಯಿತು.

ದಿ. ತೂಗುದೀಪ ಶ್ರೀನಿವಾಸ್ ಅವರ ಅಭಿಮಾನಿ ಬಳಗದ ಮುಖ್ಯ ಸಂಚಾಲಕರಾದ  ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ ಕನ್ನಡ ಸಿನಿಮಾರಂಗದಲ್ಲಿ ಖಳನಟನಿಗೂ ಬೇರೆಯದ್ದೇ ಗತ್ತು ಗಾಂಭೀರ್ಯ ಇದೆ ಎನ್ನುವುದನ್ನು ಅಭಿನಯದ ಮೂಲಕವೇ ಪ್ರೇಕ್ಷಕರಿಗೆ ತೋರಿಸಿಕೊಟ್ಟ ನಟ ತೂಗುದೀಪ್ ಶ್ರೀನಿವಾಸ್ ಅವರು.   ತೂಗುದೀಪ ಶ್ರೀನಿವಾಸ್ ನಮ್ಮಂತಹ ಸಾವಿರಾರು ಅಭಿಮಾನಿಗಳನ್ನು ಅಗಲಿದ್ದರೂ ಕೂಡ ಇಂದಿಗೂ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಅವರು ಅಜರಾಮರ. ಅವರು ಮೈಸೂರಿನಲ್ಲಿ ಹುಟ್ಟಿ ಬೆಳೆದಂತಹ ಮೇರು ಕಲಾವಿದರು.   ಲಲಿತ್ ಮಹಲ್ ರಸ್ತೆಯಲ್ಲಿರುವ ವೃತ್ತದಲ್ಲಿ ಅವರ ಕಂಚಿನ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಮೇರು ನಟನಿಗೆ ನಗರಪಾಲಿಕೆ ಗೌರವ ನೀಡಬೇಕೆಂದು ವಿನಂತಿಸಿದರು.   ತೂಗುದೀಪ್ ಶ್ರೀನಿವಾಸ್ ಅವರ ಸುಪುತ್ರ ದರ್ಶನ್ ಅವರು  ಕೋವಿಡ್ ಲಾಕ್ ಡೌನ್  ಸಂಕಷ್ಟದ ಸಂದರ್ಭದಲ್ಲಿ  ಪ್ರಾಣಿಗಳ ದತ್ತು ಸ್ವೀಕಾರ ಹಾಗೂ ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಿ, ಚಿತ್ರಮಂದಿರದ ಕೆಲಸಗಾರರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದರು ಎಂದು ನಟ ದರ್ಶನ್ ಕಾರ್ಯವನ್ನು ಶ್ಲಾಘಿಸಿದರು.

ಈ ಸಂದರ್ಭ ಹರೀಶ್ ನಾಯ್ಡು ,ದಚ್ಚು ರಾಜ್ ,ಲಿಂಗರಾಜು ,ಮಂಜುನಾಥ್ ,ವಿನೋದ್ ತಾವರೆಕೆರೆ,ಸಂತೋಷ್ ಗಜ ,ಸಂತೋಷ್ ಬಿ ಎನ್ ,ಮುರಳಿ,ಮುರುಗ ದಚ್ಚು ರಾಜ್  ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: