ಮೈಸೂರು

ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಗೆ ವೇಳಾಪಟ್ಟಿ ಬಿಡುಗಡೆ

ಮೈಸೂರು, ಅ. 16:- ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಗೆ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ 1ನೇ ನವೆಂಬರ್ 2021ಕ್ಕೆ 3 ವರ್ಷದ ಮೊದಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವವಿದ್ಯಾನಿಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಸೇರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ದಕ್ಷಿಣ ಪದವೀಧರರು 1960ರ ಮತದಾರರ ನಿಯಮದಡಿ ಸಾರ್ವಜನಿಕವಾಗಿ ನೋಂದಣಿ ನಿಯಮ 31(3) ರಡಿಯಲ್ಲಿ ಸಾರ್ವಜನಿಕ ಸೂಚನೆ ನೀಡಲು 2021ರ ಸಾರ್ವಜನಿಕವಾಗಿ ಸೂಚನೆ ನೀಡಲು ಅಕ್ಟೋಬರ್ 01ರಂದು, ನೋಂದಣಿ ನಿಯಮದ ಅನ್ವಯ 31 (4) ನಿಯಮದಡಿಯಲ್ಲಿ ಪತ್ರಿಕೆಗಳಲ್ಲಿ ಮೊದಲ ನೋಟಿಸ್ ಮರು ಪ್ರಕಟಿಸಲು ಅಕ್ಟೋಬರ್ 16ರಂದು, ಅಕ್ಟೋಬರ್ 25 ರಂದು ಪತ್ರಿಕೆಗಳಲ್ಲಿ ಮರು ಪ್ರಕಟಿಸಲು ಕಡೆಯ ದಿನವಾಗಿರುತ್ತದೆ.

ಅರ್ಜಿ ನಮೂನೆ 18ರಲ್ಲಿ ಅರ್ಜಿಗಳನ್ನು ಸ್ವೀಕರಿಸಲು ನವೆಂಬರ್ 06, ಹಸ್ತಪ್ರತಿಗಳ ತಯಾರಿಕೆ ಮತ್ತು ಕರಡು ಮತದಾರರ ಪಟ್ಟಿ ಮುದ್ರಣಕ್ಕಾಗಿ ನವೆಂಬರ್ 11, ಕರಡು ಮತದಾರರ ಪಟ್ಟಿ ಪ್ರಕಟಿಸಲು ನವೆಂಬರ್ 23, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ನವೆಂಬರ್ 23ರಿಂದ ಡಿಸೆಂಬರ್ 09ರವರೆಗೆ ಮತ್ತು ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲು ಹಾಗೂ ಪೂರಕಗಳನ್ನು ತಯಾರಿಸಿ ಮುದ್ರಿಸಲು ಡಿಸೆಂಬರ್ 25 ಮತ್ತು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಡಿಸೆಂಬರ್ 30 ಕಡೆಯ ದಿನವಾಗಿರುತ್ತದೆ.

ಅರ್ಹ ಅರ್ಜಿದಾರರು ನಮೂನೆ 18 ರಲ್ಲಿ ಈಗಾಗಲೇ ನಿಯೋಜಿಸಲ್ಪಟ್ಟಿರುವ ನಿಯೋಜಿತ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಹೀಗೆ ಸ್ವೀಕರಿಸಿದ ಅರ್ಜಿಗಳನ್ನು ಸಂಬಂದಪಟ್ಟ ಪರಿಶೀಲನಾಧಿಕಾರಿಗಳಿಂದ ಪರಿಶೀಲನೆಗೊಳಪಡಿಸಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಕ್ರಮ ವಹಿಸಲಾಗುವುದು.
ನಮೂನೆ 18 ಅರ್ಜಿಗಳನ್ನು ನಿಯೋಜಿತ ಅಧಿಕಾರಿಗಳ ಕಾರ್ಯಾಲಯದಲ್ಲಿ ಪಡೆದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.

Leave a Reply

comments

Related Articles

error: