ಮೈಸೂರು

ಶೀಘ್ರದಲ್ಲೇ ಮೈಸೂರಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಘಟಕ ಮೈಸೂರಲ್ಲಿ ಆರಂಭ

ಮೈಸೂರು, ಅ.17:- ಮೈಸೂರಿನ ಕೆ.ಆರ್.ಎಸ್. ರಸ್ತೆಯಲ್ಲಿರುವ ಸೂಪರ್ ಸ್ಪೆಷಾಲಟಿ ಆಸ್ಪತ್ರೆ ಯ ಆವರಣದಲ್ಲಿ ಶೀಘ್ರದಲ್ಲೇ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಘಟಕ ಆರಂಭವಾಗಲಿದೆ.

ಮೈಸೂರಿನಲ್ಲಿ  ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ರಾಜೀವ್ ಅವರನ್ನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಯ ನಿರ್ದೇಶಕ ಡಾ. ರಾಮಚಂದ್ರ ಭೇಟಿ ಮಾಡಿದ್ದ ವೇಳೆ ಈ ವಿಚಾರ ತಿಳಿಸಿದ್ದಾರೆ. ಇದೇ ವೇಳೆ ಡಾ.‌ ರಾಮಚಂದ್ರ ಅವರು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಸಂಶೋಧನಾ ಸಂಸ್ಥೆಯನ್ನು ಮೈಸೂರಿನಲ್ಲಿ ಆರಂಭಿಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಸಂಸ್ಥೆ ಸ್ಥಾಪನೆಗೆ 50 ಏಕರೆ ಪ್ರದೇಶ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಈ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಹಾಗೂ ಮೂಡಾ ಅಧ್ಯಕ್ಷ ಎಚ್.ವಿ. ರಾಜೀವ್ ಶೀಘ್ರವೇ ಈ ವಿಚಾರದಲ್ಲಿ ಗಮನಹರಿಸಿ 50 ಏಕರೆ ಸರಕಾರಿ ಜಾಗ ಹುಡುಕಿ ಸಂಸ್ಥೆಗೆ ನೀಡಲು ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.

ಶೀಘ್ರವೇ ಕಿದ್ವಾಯಿ ಕ್ಯಾನ್ಸರ್ ಘಟಕ ಸುಮಾರು 250 ಕೋಟಿ ವೆಚ್ಚದಲ್ಲಿ ಟ್ರಾಮಾ ಸೆಂಟರ್ ಆವರಣದ ಒಳಗೆ ಆರಂಭಿಸಲು ಕಿದ್ವಾಯಿ ನಿರ್ದೇಶಕರು ಮುಂದಾಗಿದ್ದಾರೆ. ಈ ಭೇಟಿ ವೇಳೆ ಕೆಆರ್ ಆಸ್ಪತ್ರೆ ಯ ಡೀನ್ ಡಾ. ನಂಜರಾಜ್ ಕೂಡ ಇದ್ದರು.

 

Leave a Reply

comments

Related Articles

error: