ಮೈಸೂರು

ಜಂಬೂ ಸವಾರಿ ಮುಗಿಸಿ ನಾಡಿನಿಂದ ಕಾಡಿನತ್ತ ಗಜ ಪಯಣ

ಮೈಸೂರು, ಅ.17:-ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಗಜಪಡೆ ಇಂದು ಕಾಡಿನತ್ತ ಪಯಣ ಬೆಳೆಸಿದ್ದು ಗೌರವ ಯುತವಾಗಿ ಬೀಳ್ಕೊಡ ಲಾಯಿತು.

ಅರಮನೆ ಆವರಣದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳಿಗೆ ಪೂಜೆ ನೆರವೇರಿಸಲಾಗಿದ್ದು. ಅಶ್ವತ್ಥಾಮ, ಗೋಪಾಲಸ್ವಾಮಿ ಧನಂಜಯ, ಚೈತ್ರ ಕಾವೇರಿ ಲಕ್ಷ್ಮಿ ಆನೆಗಳನ್ನು ಬೀಳ್ಕೊಡಲಾಯಿತು. 13 ರಂದು ಮೈಸೂರಿಗೆ  8 ಆನೆಗಳು ಆಗಮಿಸಿತ್ತು. ಅಭಿಮನ್ಯು ಗೋಪಾಲಸ್ವಾಮಿ ಮತ್ತಿಗೋಡು ಆನೆ ಶಿಬಿರದಿಂದ, ಅಶ್ವತ್ಥಾಮ ದೊಡ್ಡ ಹರವೆ ಆನೆ ಶಿಬಿರದಿಂದ, ವಿಕ್ರಮ, ಧನಂಜಯ, ಕಾವೇರಿ ದುಬಾರೆ ಆನೆ ಶಿಬಿರ, ಚೈತ್ರ ಹಾಗೂ ಲಕ್ಷ್ಮಿ ಆನೆ ಯನ್ನು ಬಂಡೀಪುರ ಅರಣ್ಯದ ರಾಮಪುರ ಕ್ಯಾಂಪ್‌ಗೆ ಕಳುಹಿಸಿ ಕೊಡಲಾಗಿದೆ.

ಪೂಜೆ ಬಳಿಕ ಲಾರಿಯಲ್ಲಿ ಗಜಪಡೆಗಳನ್ನು ಕಳುಹಿಸಿಕೊಡಲಾಗಿದೆ. ಆನೆಗಳು ಹೊರಡುವ ಮುನ್ನ ಸ್ನಾನ ಮಾಡಿಸಲಾಗಿತ್ತು.ಬಳಿಕ ಎಲ್ಲಾ ಆನೆಗಳನ್ನು ಒಟ್ಟಿಗೆ ನಿಲ್ಲಿಸಿ ಪೂಜೆ ಸಲ್ಲಿಸಲಾಯಿತು. ಆನೆಗಳು ಸುರಕ್ಷಿತವಾಗಿ ಸ್ವಸ್ಥಾನ ತಲುಪುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆಯ‌ ವೇಳೆ ಎಲ್ಲಾ ಎಂಟು ಆನೆಗಳು ಉಪಸ್ಥಿತರಿದ್ದವು.

ಮದವೇರಿದ ಕಾರಣ ದಸರಾ ಚಟುವಟಿಕೆಗಳಿಂದ ದೂರ ಉಳಿದಿದ್ದ ವಿಕ್ರಮ ಆನೆಯೂ ಪೂಜೆಯಲ್ಲಿ ಭಾಗಿಯಾಗಿತ್ತು. ಪೂಜೆ ಸಲ್ಲಿಸಿದ ನಂತರ ಲಾರಿಗಳನ್ನೇರಿ ಸ್ವಸ್ಥಾನಕ್ಕೆ ತೆರಳಿವೆ.

ಇಷ್ಟು ದಿನ ಮೈಸೂರು ಅರಮನೆಯಲ್ಲಿ ರಾಜಾತೀಥ್ಯ ಪಡೆಯುತ್ತಿದ್ದ ಗಜಪಡೆಯ ಕಾಡಿನ ದಿನಚರಿ ಇಲ್ಲಿಗಿಂತ ವಿಭಿನ್ನವಾಗಿರಲಿದೆ. ದಸರಾ ಕ್ಯಾಂಪ್‌ಗೆ ಹೋಗುವ ಆನೆಗಳ ಪಾಲನೆಗೆ ಸಾಕಷ್ಟು ನಿಯಮಗಳಿವೆ. ಆನೆಗಳನ್ನು ಸಹಾ ಸರ್ಕಾರಿ ನೌಕರರೆಂದೇ ಪರಿಗಣಿಸಲಾಗುತ್ತದೆ. ಆನೆಗಳಿಗೆ ನೀಡುವ ಪ್ರಮಾಣ ಸಹಾ ನಿಗದಿಯಾಗಿರುತ್ತದೆ. ಇಲ್ಲಿಯಂತೆ ವಿಶೇಷ ಆಹಾರ ಸಿಗುವುದಿಲ್ಲ. ಆದರೆ ಆನೆಗಳಿಗೆ ಪ್ರಕೃತಿದತ್ತವಾದ ಆಹಾರಗಳು ಯಥೇಚ್ಛವಾಗಿ ಸಿಗುತ್ತದೆ. ಇನ್ನು ಈ ಕಾಡು ಆನೆಗಳು ಕಾಡಿನಲ್ಲಿ ಪ್ರಮುಖ ಸೇನಾನಿಗಳಾಗಿ ಕೆಲಸ ಮಾಡುತ್ತವೆ. ಮುಖ್ಯವಾಗಿ ಕಾಡು ಪ್ರಾಣಿಗಳು ನಾಡಿಗೆ ಬಂದಾಗ ಅವುಗಳನ್ನು ಮತ್ತೆ ಕಾಡಿಗೆ ಹಿಮ್ಮೆಟ್ಟಿಸುವ ಮಹತ್ವದ ಕೆಲಸಕ್ಕೆ ಈ ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ ಕಾಡಿನಲ್ಲಿ ಸೆರೆ ಸಿಗುವ ಕಾಡಾನೆಗಳನ್ನು ಪಳಗಿಸಲು ಈ ಆನೆಗಳದ್ದೆ ಮಹತ್ವದ ಪಾತ್ರವಾಗಿರುತ್ತದೆ. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: