ಸುದ್ದಿ ಸಂಕ್ಷಿಪ್ತ

ಚಿಣ್ಣರ ನಾಟಕೋತ್ಸವ ಮೇ 5ರಿಂದ 9ರವರೆಗೆ

ಮೈಸೂರು, ಮೇ 4:- ಏ.10 ರಿಂದ ಮೇ 10 ರವರೆಗೆ ಮೈಸೂರು ರಂಗಾಯಣದ ಆವರಣದಲ್ಲಿ ನಡೆಯುತ್ತಿದ್ದ ಚಿಣ್ಣರ ಮೇಳ-2017 ರ ನಾಟಕೋತ್ಸವದ ಉದ್ಘಾಟನಾ ಸಮಾರಂಭವನ್ನು ಮೇ 5 ರಂದು ಸಂಜೆ 5 ಗಂಟೆಗೆ ರಂಗಾಯಣದ ವನರಂಗದಲ್ಲಿ ಆಯೋಜಿಸಲಾಗಿದೆ.  ಖ್ಯಾತ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣದ ನಿರ್ದೇಶಕ ಕೆ.ಎ.ದಯಾನಂದ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ನಾಟಕೋತ್ಸವದಲ್ಲಿ ಚಿಣ್ಣರ ಮೇಳದ ಮಕ್ಕಳು ಮೇ 5 ರಿಂದ 9 ರವರೆಗೆ ಪ್ರತಿದಿನ ಸಂಜೆ 6.30 ಕ್ಕೆ ರಂಗಾಯಣದ ವನರಂಗದಲ್ಲಿ ನಾಟಕಗಳನ್ನು ಪ್ರದರ್ಶಿಸಲಿದ್ದಾರೆ.

ಮೇ 10ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ  ನಡೆಯಲಿದ್ದು,  ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಸಮಾರೋಪ ನುಡಿಗಳನ್ನಾಡಲಿದ್ದಾರೆ.  ಮುಖ್ಯ ಅತಿಥಿಯಾಗಿ 2016 ನೇ  ಸಾಲಿನ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಪುರಸ್ಕೃತೆ ಸಿರಿ ವಾನಳ್ಳಿಉಪಸ್ಥಿತರಿರುತ್ತಾರೆ.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣದ ನಿರ್ದೇಶಕ ಕೆ.ಎ.ದಯಾನಂದ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಬಿರದ ನಿರ್ದೇಶಕ ಮೈಮ್ ರಮೇಶ್ ಹಾಗೂ ರಂಗಾಯಣದ ಉಪನಿರ್ದೇಶಕ ನಿರ್ಮಲಾ ಮಠಪತಿ ಹಾಜರಿರುತ್ತಾರೆ.  -(ವರದಿ: ಕೆ.ಎಂ.ಆರ್.ಎಲ್.ಜಿ)

Leave a Reply

comments

Related Articles

error: