ಮೈಸೂರು

ಕೇಂದ್ರ ಸರ್ಕಾರದ ವಿರುದ್ಧ ದೊಣ್ಣೆ ಚಳವಳಿ

ಮೈಸೂರು,ಅ.18:- ಕೇಂದ್ರ ಸರ್ಕಾರದ ವಿರುದ್ಧ ಮೈಸೂರು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಕಾರ್ಯಕರ್ತರು ನಿನ್ನೆ ಇಲ್ಲಿನ ರೈಲ್ವೆ ನಿಲ್ದಾಣದ ಮುಂಭಾಗದ ಡಾ.ಬಾಬೂಜಗಜೀವನರಾಮ್ ಪ್ರತಿಮೆ ಎದುರು ದೊಣ್ಣೆ ಹಿಡಿದು ದೊಣ್ಣೆ ಚಳವಳಿ ನಡೆಸಿದರು.

ಚಳವಳಿಗಾರರು ಮಾತನಾಡಿ ಕೇಂದ್ರ ಸರ್ಕಾರವು ಕಾರ್ಮಿಕರನ್ನು ದಮನ ಮಾಡಲೆಂದು ಅತ್ಯುಗ್ರ ಕಾನೂನುಗಳನ್ನು ಜಾರಿಗೊಳಿಸಿದೆ. ಇದರಿಂದ ಕಾರ್ಮಿಕರ ಬದುಕಿನ ಬವಣೆ ಇನ್ನಷ್ಟು ಹೆಚ್ಚುವಂತಾಗಿದೆ. ‘ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಕೋವಿಡ್‌ನಿಂದ ನೂರಾರು ಮಂದಿ ಕೆಲಸ ಕಳೆದುಕೊಂಡರೂ ಸರ್ಕಾರ ಅವರ ಪರ ನಿಲ್ಲಲಿಲ್ಲ’ ಎಂದು ಕಿಡಿಕಾರಿದರು. ಸರ್ಕಾರ ಜಾರಿಗೆ ತಂದಿರುವ ಕಾನೂನುಗಳೆಲ್ಲವೂ ಮಾಲೀಕರ ಪರವಾಗಿಯೇ ಇದೆ. ಕಾರ್ಮಿಕರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇಂತಹ ಕಾನೂನುಗಳನ್ನು ಕೂಡಲೇ  ವಾಪಸ್ ಪಡೆಯುವಂತೆ  ಆಗ್ರಹಿಸಿದರು. ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರನ್ನು ಓಡಿಸಲು ಊರುಗೋಲು ಬಳಸಿ ಚಳವಳಿ ಕಟ್ಟಿದರು. ಈಗ ಬಿಜೆಪಿಯನ್ನು ಅಧಿಕಾರದಿಂದ ಓಡಿಸಲು ಅದೇ ಮಾದರಿಯಲ್ಲಿ ಚಳವಳಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಕಾರ್ಮಿಕ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌. ಕೆ.ಮಂಜುನಾಥ್, ಮುಖಂಡರಾದ ರವಿ ಮಾವಿನಹಳ್ಳಿ, ಮುಖಂಡರಾದ ಹೆಡತಲೆ ಮಂಜುನಾಥ್, ಮಂಜುಳಾ ಮಂಜುನಾಥ‌, ಹಿನಕಲ್ ಪ್ರಕಾಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: