ದೇಶಪ್ರಮುಖ ಸುದ್ದಿ

ಕೇರಳದಲ್ಲಿ ಭಾರೀ ಮಳೆ : ಕೊಚ್ಚಿ ಹೋದ ಮನೆ

ದೇಶ(ಕೊಚ್ಚಿ)ಅ.18:-  ಕೇರಳದಲ್ಲಿ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಭಾರೀ ಮಳೆಯಿಂದಾಗಿ ಹಲವು ಮನೆಗಳು ಪ್ರವಾಹದಲ್ಲಿ ಮುಳುಗಿವೆ. ಕೊಟ್ಟಾಯಂನಲ್ಲಿ ಮನೆಯೊಂದು ನೀರಿನ ರಭಸಕ್ಕೆ ಆಟಿಕೆಯಂತೆ ಕೊಚ್ಚಿಕೊಂಡು ಹೋಗಿದೆ. ರಾಜ್ಯದಲ್ಲಿ ಇದುವರೆಗೆ 27 ಮಂದಿ ಮಳೆಯಿಂದ ಸಾವನ್ನಪ್ಪಿದ್ದಾರೆ.

ಮುಂಗಾರು ಮುಗಿಯುವ ಮುನ್ನ, ಮಳೆ ಮತ್ತೆ ದೇಶವನ್ನು ತತ್ತರಿಸುವಂತೆ ಮಾಡಿದೆ. ಎಲ್ಲೋ  ಒಂದು ಕಡೆ ಈ ಮಳೆ ವಿಶ್ರಾಂತಿಯನ್ನು ಪಡೆದರೆ,  ಮತ್ತೆಲ್ಲೋ   ಮಾರಕವಾಗಿ ಪರಿಣಮಿಸಿದೆ. ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯು ಪರಿಸ್ಥಿತಿಯನ್ನು ತುಂಬಾ ಗಂಭೀರವಾಗಿಸಿದೆ. ಇಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಒಟ್ಟು 27 ಜನರು ಪ್ರಾಣ ಕಳೆದುಕೊಂಡಿದ್ದು, 8 ಮಂದಿ ನಾಪತ್ತೆಯಾಗಿದ್ದಾರೆ. ನಿನ್ನೆ ಸಂಜೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಇಡೀ ಮನೆ ಕೊಚ್ಚಿ ಹೋಗಿದೆ. ರಸ್ತೆಯ ಮೇಲೆ ನಿಂತ ಜನರು ಘಟನೆಯ ವಿಡಿಯೋ ಮಾಡಿದ್ದಾರೆ. ಅಪಘಾತದ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಯಾರಿಗೂ ಯಾವುದೇ ಹಾನಿಯಾದ ಕುರಿತು ವರದಿಯಾಗಿಲ್ಲ.

ರಕ್ಷಣಾ ಕಾರ್ಯಾಚರಣೆಗಾಗಿ ಕಣ್ಣೂರಿನಿಂದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಘಟಕಗಳೊಂದಿಗೆ ಸೇನಾ ಸಿಬ್ಬಂದಿಯ ತಂಡ ವಯನಾಡಿಗೆ ತಲುಪಿದೆ ಎಂದು ರಕ್ಷಣಾ ಪಿಆರ್‌ಒ ತಿಳಿಸಿದ್ದಾರೆ. ಸೇನೆಯಿಂದ ಇದುವರೆಗೆ ಒಟ್ಟು 3 ಘಟಕಗಳನ್ನು ನಿಯೋಜಿಸಲಾಗಿದೆ. ಮಳೆ ಪೀಡಿತ ಪ್ರದೇಶಗಳಿಗೆ ನೆವಿ ಚಾಪರ್ ಮೂಲಕ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಎರಡು ವಾಯುಪಡೆಯ ಹೆಲಿಕಾಪ್ಟರ್‌ಗಳು MI-17 ಏರ್ ಫೋರ್ಸ್ ಸ್ಟೇಷನ್ ಶಂಗಾಮುಘಮ್‌ನಲ್ಲಿ ಸ್ಟ್ಯಾಂಡ್‌ಬೈನಲ್ಲಿವೆ.

ನಿನ್ನೆಯಿಂದ ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಅವಾಂತರ ಸೃಷ್ಟಿಸಿದೆ. ಆಲಂ ನಲ್ಲಿ  ಪ್ರವಾಹ ಮತ್ತು ಭೂಕುಸಿತದಿಂದಾಗಿ ಹೆಚ್ಚಿನ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸೈನಿಕರು  ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.  ಹಲವು ಮನೆಗಳಿಗೆ ನೀರು ನುಗ್ಗಿದೆ. ನದಿಯಲ್ಲಿ ಪ್ರವಾಹ ಉಕ್ಕಿದ್ದು  ನೀರಿನ ಮಟ್ಟವೂ ಹೆಚ್ಚಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮಾತುಕತೆ ನಡೆಸಿದ್ದಾರೆ.

ಉತ್ತರ ಭಾರತದಲ್ಲಿ   ಮಧ್ಯಪ್ರದೇಶ, ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡದಲ್ಲೂ ಮಳೆಯಾಗುತ್ತಿದೆ. ಉತ್ತರಾಖಂಡಕ್ಕೆ ಹವಾಮಾನ ಇಲಾಖೆ ಸೋಮವಾರ ಮತ್ತು ಮಂಗಳವಾರ  ಇಂದು ರೆಡ್ ಅಲರ್ಟ್ ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ  ಚಾರ್ ಧಾಮ್ ಯಾತ್ರೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಸೋಮವಾರ ಶಾಲೆಗಳನ್ನು ಮುಚ್ಚಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: