ಮೈಸೂರು

ಡೀಸೆಲ್  ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಮೈಸೂರು,ಅ.18:- ಡೀಸೆಲ್  ಬೆಲೆ ಏರಿಕೆ ವಿರೋಧಿಸಿ  ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಮೈಸೂರು ನಗರದ ಆರ್ ಟಿ ಓ ವೃತ್ತದ ಪೆಟ್ರೋಲ್ ಬಂಕ್ ಮುಂಭಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಟೌಟ್ ಗೆ 100 ರೂಗಳ ಹಾರ ಹಾಕಿ  ಅಣಕು ಪ್ರದರ್ಶನದ ಮೂಲಕ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಯಿತು.

ಈ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಮೂರ್ತಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಿ ಸೋಮಶೇಖರ್,ಶ್ರೀಧರ್,ಪಾಲಿಕೆ ಸದಸ್ಯರಾದ ಜೆ ಗೋಪಿ,ಮಾಜಿ ಸದಸ್ಯ ಎಂ ಸುನೀಲ್,ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ.ಎಂ ಕೆ ಅಶೋಕ್,ಡಿಸಿಸಿ ಕಾರ್ಯದರ್ಶಿ ಡೈರಿ ವೆಂಕಟೇಶ್,ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಜೆ ವಿನಯ್ ಕುಮಾರ್,ರಾಜ್ಯ ಉಪಾಧ್ಯಕ್ಷರಾದ ಸುನೀಲ್,ಲೋಕೇಶ್ ಕುಮಾರ್ ಮಾದಾಪುರ,ಹರೀಶ್,ಪ್ರದೀಪ್ ಕುಮಾರ್,ಪಳನಿಸ್ವಾಮಿ,ಎಸ್ ಸಿ ವಿಭಾಗ ಸುರೇಶ್,ಜೋಗಿ ಮಹೇಶ್,ಟೈಲರ್ ಸಿದ್ದು,ಮಹದೇಶ್,ಶಂಕರ್,ಕೇಬಲ್ ಮಹದೇವು,ಚೇತನ್,ಅಲ್ಪಸಂಖ್ಯಾತ ಮುಖಂಡರಾದ ಫಾರುಖ್,ನಾಸೀರ್,ಇರ್ಫಾನ್,ಬೀರೇಶ್,ಗುಣಶೇಖರ್,ರಂಜನ್,ಅಭಿಷೇಕ್ ಶಿವಣ್ಣ,ಪ್ರವೀಣ್,ರಾಜ್ಯ ಕಾರ್ಯದರ್ಶಿ ದೀಪಕ್ ಶಿವಣ್ಣ,ಪುನೀತ್,ಆನಂದ್, ಮಾರುತಿ,ದಿಲೀಪ್,ಸತ್ಯ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: