ಮೈಸೂರು

ನಿರಂತರ ಸೋಲಿನಿಂದಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಗೆ ಮತಿಭ್ರಮಣೆ ಆದಂತಿದೆ : ಎಂ.ಜಿ.ಮಹೇಶ್

ಮೈಸೂರು,ಅ.18:-  ವಿಪಕ್ಷ ನಾಯಕ ಸಿದ್ದರಾಮಯ್ಯ ನಾಲಿಗೆಯ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಬಾಯಿಗೆ ಬಂದಂತೆ ಹರಟುತ್ತಾರೆ, ಅಹಂಕಾರದ ಮಾತುಗಳು, ತಿರಸ್ಕಾರದ ಮಾತುಗಳು ಅಸಂಸ್ಕೃತಿ ಮಾತುಗಳು ಎಲ್ಲರನ್ನೂ ಏಕವಚನದಲ್ಲಿ ಮಾತನಾಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ ತಾನೊಬ್ಬನೇ ಬಡವರ ಗುತ್ತಿಗೆದಾರ ಅಂದುಕೊಂಡು ಬಿಟ್ಟಿದ್ದಾರೆ ಎಂದು   ರಾಜ್ಯ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಕಿಡಿಕಾರಿದರು.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಪಂಚತಾರಾ ಹೋಟೆಲಿನಲ್ಲಿ ನೈಟ್ ಕ್ಲಬ್ ನಡೆಸುತ್ತಿದ್ದ ವಿದೇಶಗಳಲ್ಲಿ ಕೇವಲ ನೃತ್ಯ ಕಾರ್ಯಕ್ರಮಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದ ಹಾಗೂ ಮೊಮ್ಮಕ್ಕಳನ್ನು ವಿದೇಶದಲ್ಲಿ ಐಷಾರಾಮಿ ಶಾಲೆಗಳಲ್ಲಿ ಓದಿಸುತ್ತಾ ಬಡವರ ಹೆಸರಿನಲ್ಲಿ ನಾಟಕ ಆಡುತ್ತಿದ್ದಾರೆ. ಅವರೊಬ್ಬರೇ ಸತ್ಯ ಹರಿಶ್ಚಂದ್ರ.  ಸಾವಿರಾರು ಕೋಟಿ ದೆಹಲಿಗೆ ಕಳಿಸಿದರು.ಇದೆಲ್ಲಾ ಅವರ ಪರಿಶ್ರಮದ ಸಂಪಾದನೆ ಹೇಳುತ್ತಾ ಹೋದರೆ ಒಂದು ದೊಡ್ಡ ಪಟ್ಟಿ ಇದೆ ಕಾಂಗ್ರೆಸ್ ಪಕ್ಷದ ಹಿಡಿತಕ್ಕಾಗಿ ನಾಲಿಗೆ ಹರಿಬಿಟ್ಟಿದ್ದಾರೆ ಸ್ವಲ್ಪ ಎಚ್ಚರವಿರಬೇಕು ಜನರೇನು ಮೂರ್ಖರಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ನ ನಿರಂತರ ಸೋಲಿನಿಂದಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಗೆ ಮತಿಭ್ರಮಣೆ ಆದಂತಿದೆ. ಅದಕ್ಕಾಗಿ ನಿರಂತರ ಪ್ರಚಾರದಲ್ಲಿರುವ ದೃಷ್ಟಿಯಿಂದ ಅವರು ಈ ಹಿಂದೆ ಆರ್‌ಎಸ್‌ಎಸ್‌ ಬಗ್ಗೆ, ಟೀಕಿಸುವುದನ್ನೇ ಚಾಳಿ ಮಾಡಿಕೊಂಡಿದ್ದರು. ಈಗ ವಿಶ್ವವಂದ್ಯ ನಾಯಕರಾದ   ನರೇಂದ್ರ ಮೋದಿ ಅವರ ಕುರಿತಂತೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಜೆಡಿಎಸ್‌ನಿಂದ ಅಧಿಕಾರದ ಲಾಲಸೆಗಾಗಿ ವಲಸೆ ಬಂದ ಸಿದ್ದರಾಮಯ, ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ ನಾಯಕರಾಗಿ ಹತಾಶೆಯ ಪರಮಾವಧಿಗೆ ತಲುಪಿದ್ದಾರೆ. ಅದಕ್ಕಾಗಿ ತಮ್ಮ ಬಾಯಿ ಚವಲ ತೀರಿಸಿಕೊಳ್ಳಲು ಇಲ್ಲ ಸಲ್ಲದ ಮಾತನ್ನು ಮುಂದುವರೆಸಿದ್ದಾರೆ ಎಂದು ಕಿಡಿಕಾರಿದರು.

ದಲಿತರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲರೂ ಕಾಂಗ್ರೆಸನ್ನು ಮೂಲೆಗುಂಪು ಮಾಡುತ್ತಿರುವುದು ಸಿದ್ದರಾಮಯ್ಯನವರಿಗೆ ಗೊತ್ತಾದಂತಿದೆ. ಅದೇ ಕಾರಣಕ್ಕಾಗಿ ಮುಖ್ಯಮಂತ್ರಿ ಕುರಿತ ತಿರುಕನ ಕನಸು ಕನಸಾಗಿಯೇ ಉಳಿಯುವ ಭೀತಿಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತ ಇರುವ ಎಲ್ಲ ರಾಜ್ಯಗಳಲ್ಲಿ ಒಳಜಗಳ ಮುಂದುವರಿದಿದೆ. ಕರ್ನಾಟಕದಲ್ಲಂತೂ ಡಿ.ಕೆ. ಶಿವಕುಮಾರ್ ಬಣ, ಸಿದ್ಧರಾಮಯ್ಯ ಬಣ, ಡಾ. ಪರಮೇಶ್ವರ್‌ ಬಣ, ಮಲ್ಲಿಕಾರ್ಜುನ ಖರ್ಗೆ ಅವರ ಬಣ ಹೀಗೆ ಹತ್ತು ಹಲವು ಬಣಗಳಿಂದಾಗಿ ಕಾಂಗ್ರೆಸ್ ಪಕ್ಷವು ನುಚ್ಚುನೂರಾಗುವ ಹಂತದಲ್ಲಿದೆ. ಅದಕ್ಕಾಗಿ ಈ ಹುಚ್ಚುತನದ ಆರೋಪಗಳನ್ನು ಮತ್ತು ಆಕ್ಷೇಪಣ ಹೇಳಿಕೆಗಳನ್ನು ಸಿದ್ದರಾಮಯ್ಯ ಮುಂದುವರೆಸಿದ್ದಾರೆ ಎಂದರು.

ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಬರುವುದು ಆ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಸೇರಿದಂತೆ ಅನೇಕರಿಗೆ ಇಷ್ಟವಿರಲಿಲ್ಲ, ಅದನ್ನು ಅವರು ವ್ಯಕ್ತಪಡಿಸಿದ್ದರು. ಇದೆಲ್ಲವನ್ನು ಮನಗಂಡು ಸಿದ್ದರಾಮಯ್ಯ ನಮ್ಮ ಹತಾಶೆಯ ಮನೋಪ್ರವೃತಿಯನ್ನು ಮುಂದುವರೆಸಿದಂತೆ ಕಾಣುತ್ತಿದೆ.

ನಿರಂತರ 2 ದಶಕಗಳಿಂದ ಜನರಿಂದ ಆಯ್ಕೆಯಾಗಿ ಅಪಾರ ಜನಮನ್ನಣೆಯೊಂದಿಗೆ ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರಧಾನಿಯವರ ಕುರಿತಂತೆ ಏಕವಚನದಲ್ಲಿ ಮಾತನಾಡುವ ಮುನ್ನ ಸಿದ್ಧರಾಮಯ್ಯನವರು ಎಚ್ಚರ ವಹಿಸಬೇಕು ಮತ್ತು ತಮ್ಮ ಹೇಳಿಕೆಗಾಗಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಪ್ರಧಾನಿಯವರ ಹುದ್ದೆಯ ಕುರಿತು ಕೀಳು ಮಟ್ಟದಲ್ಲಿ ಮಾತನಾಡಿರುವುದು ಸಿದ್ದರಾಮಯ್ಯನವರ ಕೀಳು ಸಂಸ್ಕಾರವನ್ನು ಅನಾವರಣ ಮಾಡಿದೆ. ಸರ್ಕಾರಿ ಬಂಗಲೆಯಲ್ಲೇ ಉಳಿಯಬೇಕೆಂಬ ಹಠಕ್ಕಾಗಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಕಪಿಮುಷ್ಠಿಯೊಳಗೆ ಪಟ್ಟು ಹಿಡಿದು ಉಳಿಸಿಕೊಂಡ ನಿಮ್ಮಂತವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯವಿದೆ ಎಂದು ಪ್ರಶ್ನಿಸಿದರಲ್ಲದೇ,ಸಿದ್ದರಾಮಯ್ಯ ನವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸನ್ನು ರಾಜ್ಯದಲ್ಲಿ ನಾಮಾವಶೇಷ ಮಾಡಲು ಬಿಜೆಪಿ ಕಾರ್ಯಕರ್ತರು ಹೆಚ್ಚು ಶ್ರಮದಿಂದ ದುಡಿಯಲಿದ್ದಾರೆ ಎಂದು ತಿಳಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: