ಮೈಸೂರು

ರೈಸ್ ಮಿಲ್‌ ನಲ್ಲಿ ದಾಸ್ತಾನು ಮಾಡಿದ್ದ 85 ಮೂಟೆ ನಕಲಿ ಗೊಬ್ಬರ ಜಪ್ತಿ

ಮೈಸೂರು,ಅ.18:-  ರೈಸ್ ಮಿಲ್‌ ನಲ್ಲಿ ದಾಸ್ತಾನು ಮಾಡಿದ್ದ 85 ಮೂಟೆ ನಕಲಿ ಗೊಬ್ಬರವನ್ನು ತಹಶೀಲ್ದಾರ್ ಸಂತೋಷ್ ನೇತೃತ್ವದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಜಪ್ತಿ ಮಾಡಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹರಂಬಳ್ಳಿ ಗ್ರಾಮದ ಹೇಮಾವತಿ ರೈಸ್ ಮಿಲ್‌ ನಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹರಂಬಳ್ಳಿ ಗ್ರಾಮದ ಹೇಮಾವತಿ ರೈಸ್ ಮಿಲ್‌ ನಲ್ಲಿ ಪೊಟ್ಯಾಷಿಯಂ, ಎಂಒಪಿ, ಉಪ್ಪು, ಡಿಎಪಿ ಇತ್ಯಾದಿ ಗೊಬ್ಬರಗಳ ಮಾದರಿಯಲ್ಲಿ ನಕಲಿ ಗೊಬ್ಬರ, ಮಣ್ಣು, ಕೆರೆಯ ಮಣ್ಣಿಗೆ ರೆಡ್ ಆಕ್ಸೈಡ್​ ಬಣ್ಣ ಬೆರೆಸಿ ನಕಲಿ ಗೊಬ್ಬರ ಸಿದ್ಧಪಡಿಸಲಾಗಿತ್ತು. 85 ಮೂಟೆ ನಕಲಿ ಗೊಬ್ಬರ ವಶಕ್ಕೆ   ತೆಗೆದುಕೊಂಡು ನಕಲಿ ಗೊಬ್ಬರ ಇಲಾಖಾ ಪರೀಕ್ಷೆಗೆ ರವಾನೆ ಮಾಡಲಾಗಿದೆ. ವರದಿ‌ ಬಂದ ನಂತರ ಪ್ರಕರಣ ದಾಖಲಿಕೊಳ್ಳಲು ತಹಶೀಲ್ದಾರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: