ಮೈಸೂರು

ನಾಳೆ ಮೃಗಾಲಯಕ್ಕೆ ರಜೆ ಇಲ್ಲ

ಮೈಸೂರು,ಅ.18: -ಮೈಸೂರು ಮೃಗಾಲಯಕ್ಕೆ ನಾಳೆ (ಅಕ್ಟೋಬರ್ 19) ವಾರದ ರಜೆ ಇಲ್ಲ ಎಂದು ಮೃಗಾಲಯ ಪ್ರಾಧಿಕಾರ ತಿಳಿಸಿದೆ.

ಈದ್ ಮಿಲಾದ್‌ ಹಿನ್ನೆಲೆ ನಾಳೆ ಸರ್ಕಾರಿ ರಜೆ ಇದೆ. ಹೀಗಾಗಿ ಮೃಗಾಲಯಕ್ಕೆ ಹೆಚ್ಚಿನ ಜನ ಬರುವ ನಿರೀಕ್ಷೆ ಇದೆ. ಈ ಕಾರಣದಿಂದ ಮೃಗಾಲಯ ನಾಳೆಯೂ ತೆರೆದಿರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೃಗಾಲಯಕ್ಕೆ ಪ್ರತಿ ಮಂಗಳವಾರ ವಾರದ ರಜೆ ಇರುತ್ತಿತ್ತು. ಆದರೆ, ನಾಳೆ ಈದ್ ಮಿಲಾದ್ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದೆ. ಹೀಗಾಗಿ ನಾಳೆ ಮೃಗಾಲಯ ಪ್ರವಾಸಿಗರಿಗೆ ತೆರೆದಿರಲಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಮಾಹಿತಿ ನೀಡಿದ್ದಾರೆ.

Leave a Reply

comments

Related Articles

error: