ದೇಶಪ್ರಮುಖ ಸುದ್ದಿಮನರಂಜನೆ

ಅವಹೇಳನಕಾರಿ ಹೇಳಿಕೆ ಪ್ರಕರಣ : ನಟಿ ಯುವಿಕಾ ಚೌಧರಿ ಬಂಧನ ;  ಜಾಮೀನು

ದೇಶ(ಹರಿಯಾಣ)ಅ.19:- ನಟಿ ಯುವಿಕಾ ಚೌಧರಿಯನ್ನು ಇತ್ತೀಚೆಗೆ ಹರಿಯಾಣ ಪೊಲೀಸರು ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ.

ಇತ್ತೀಚೆಗೆ  ನಟಿಯ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ತನ್ನ ಸಾಮಾಜಿಕ ಜಾಲತಾಣ ಖಾತೆಯಿಂದ ಹಂಚಿಕೊಂಡಿರುವ ಈ ವಿಡಿಯೋದಿಂದಾಗಿ ಯುವಿಕಾರನ್ನು ತುಂಬಾ ಟ್ರೋಲ್ ಮಾಡಲಾಗಿತ್ತು. ವಾಸ್ತವವಾಗಿ  ಈ ವಿಡಿಯೋದಲ್ಲಿ ನಟಿ ಜಾತಿಗೆ ಸಂಬಂಧಿಸಿದಂತೆ ಅವಹೇಳನಕಾರಿ ಪದಗಳನ್ನು ಬಳಸಿದ್ದರು ಎನ್ನಲಾಗಿದೆ. ಅದರ ನಂತರ  ಈ ಬಗ್ಗೆ ಕ್ರಮ ಕೈಗೊಂಡ ಪೊಲೀಸರು ಅವರನ್ನು ಸೋಮವಾರ ಬಂಧಿಸಿದ್ದಾರೆ.

ಮಾಹಿತಿಯ ಪ್ರಕಾರ ಪೊಲೀಸರು ನಟಿಯನ್ನು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಔಪಚಾರಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ನಟಿ ಪರಿಶಿಷ್ಟ ಜಾತಿಗಳ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ಮೇ ತಿಂಗಳಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದು ನಂತರ ಸಾಕಷ್ಟು ಗದ್ದಲ ಉಂಟಾಗಿತ್ತು. ಈ ವಿಷಯದಲ್ಲಿ ಅವರ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಟಿ ವಿರುದ್ಧ ದಲಿತ ಹಕ್ಕುಗಳ ಹೋರಾಟಗಾರ ರಜತ್ ಕಲ್ಸನ್ ಪ್ರಕರಣ ದಾಖಲಿಸಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: