ಮೈಸೂರು

ಮುಸ್ಲಿಂರ ಪವಿತ್ರ ಹಬ್ಬ ‘ಈದ್ ಮಿಲಾದ್’ ಗೆ ಗಣ್ಯರ ಶುಭ ಹಾರೈಕೆ

ಮೈಸೂರು,ಅ.19:- ಇಂದು ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ‘ಈದ್ ಮಿಲಾದ್’ ಈ ಶುಭ ಸಂದರ್ಭದಲ್ಲಿ ರಾಜಕೀಯ ಗಣ್ಯರು ಶುಭ ಹಾರೈಸಿದ್ದಾರೆ.

ಮಾಜಿ ಸಚಿವ ಡಾ.ಹೆಚ್ ಸಿ.ಮಹದೇವಪ್ಪ ಅವರು ಟ್ವೀಟ್ ಮಾಡಿ “ನಾಡಿನ ಸಮಸ್ತ ಜನತೆಗೆ ಬದುಕಿನ ಭರವಸೆಯ ಸಂದೇಶವನ್ನಿತ್ತ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರವಾದಿ ಮಹಮದ್ ಅವರ ಜನ್ಮದಿನದಂದು ಅವರ ಪ್ರೀತಿ, ತ್ಯಾಗ ಭಾವೈಕ್ಯತೆಯ ಸಂದೇಶವನ್ನು ಎಲ್ಲೆಡೆ ಸಾರೋಣ ಎಂದು ಮನದುಂಬಿ ಆಶಿಸುತ್ತೇನೆ” ಎಂದಿದ್ದಾರೆ.

ಶಾಸಕ ಜಿ.ಟಿ.ದೇವೇಗೌಡ ಅವರು ಟ್ವೀಟ್ ಮಾಡಿ  ‘ಈದ್ ಮಿಲಾದ್’ನ ಈ ಪವಿತ್ರ ದಿನದಂದು ಕರುಣೆ ಮತ್ತು ಸೋದರತ್ವ ಮತ್ತಷ್ಟು ವಿಸ್ತರಿಸಲಿ. ಎಲ್ಲರೂ ಆರೋಗ್ಯ ಮತ್ತು ಖುಷಿಯಿಂದ ಇರುವಂತಾಗಲಿ. ಎಲ್ಲರಿಗೂ ʻಮಿಲಾದ್‌–ಉನ್–ನಬಿ’ ದಿನದ ಶುಭಾಶಯಗಳು. ಈದ್‌ ಮುಬಾರಕ್‌! “ ಎಂದು ಶುಭ ಹಾರೈಸಿದ್ದಾರೆ.

Leave a Reply

comments

Related Articles

error: