ಮೈಸೂರು

ಜಯಪುರ ಗ್ರಾಮದಲ್ಲಿ ಕೋಳಿಗಳನ್ನು ತಿಂದಿದ್ದ ಚಿರತೆ ಕೊನೆಗೂ ಸೆರೆ

ಮೈಸೂರು,ಅ.19:- ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ ಕೋಳಿ ಫಾರ್ಮ್​ ಗೆ ದಾಳಿ ನಡೆಸಿ ಕೋಳಿಗಳನ್ನು ತಿಂದಿದ್ದ ಚಿರತೆ ಕೊನೆಗೂ ಸೆರೆಯಾಗಿದೆ.

ಜಯಪುರದ ಮೂಡೆಗೌಡ ಎಂಬವರ ಕೋಳಿ ಫಾರ್ಮ್ ನಲ್ಲಿ ಚಿರತೆ ಸೆರೆಯಾಗಿದೆ.  ಜಯಪುರ ಗ್ರಾಮದ ರೈತ ಬಸಪ್ಪ ಅವರು ತಮ್ಮ ತೋಟದ ಮನೆಯಲ್ಲಿ ಫಾರ್ಮ್​ನಲ್ಲಿ ಕೋಳಿ ಸಾಕಿದ್ದರು. ಈ ಫಾರ್ಮ್ ​ಗೆ ಸೋಮವಾರ ರಾತ್ರಿ   ಚಿರತೆ ದಾಳಿ ನಡೆಸಿ ಕೋಳಿಗಳನ್ನು ತಿಂದು ಆರಾಮಾಗಿ ಫಾರ್ಮ್ ನಲ್ಲೇ ರಾತ್ರಿ ಉಳಿದುಕೊಂಡಿತ್ತು.

ಬೆಳಗಿನ ಜಾವ 4.45ರ ವೇಳೆಗೆ ಕೋಳಿಗಳನ್ನು ನೋಡಲು ಬಸಪ್ಪ ಫಾರ್ಮ್​ಗೆ ಆಗಮಿಸಿ ಟಾರ್ಚ್ ಬಿಟ್ಟ ಸಂದರ್ಭದಲ್ಲಿ ಚಿರತೆ ಘರ್ಜಿಸಿತ್ತು. ತಕ್ಷಣ ಬಾಗಿಲು ಹಾಕಿದ ಬಸಪ್ಪ ಅವರು ಚಿರತೆ ಹೊರ ಹೋಗದಂತೆ ನೋಡಿಕೊಂಡರು.

ಚಿರತೆ ಕೋಳಿ ಫಾರ್ಮ್ ​ನಲ್ಲಿ ಸೇರಿಕೊಂಡಿರುವ  ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದು,  ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: