ಮೈಸೂರು

ಅ.22-31 ರವರೆಗೆ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ ನಲ್ಲಿ ಗಾಂಧಿ ಶಿಲ್ಪಬಜಾರ್

ಮೈಸೂರು,ಅ.19:- ಭಾರತ ಸರ್ಕಾರದ ಜವಳಿ ಮಂತ್ರಾಲಯ ಕರಕುಶಲ ಅಭಿವೃದ್ಧಿ ಆಯುಕ್ತರ ಕಛೇರಿಯ ಸಹಯೋಗದೊಂದಿಗೆ ಗಾಂಧಿ ಶಿಲ್ಪ ಬಜಾರ್ ಎಂಬ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟವನ್ನು 2021ರ  ಅಕ್ಟೋಬರ್ 22 ರಿಂದ 31 ವರೆಗೆ  ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ ನಲ್ಲಿ ಆಯೋಜಿಸಲಾಗಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಯೂ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಯಿತು. ಭಾರತೀಯ ಹಸ್ತಶಿಲ್ಪ ಕಲೆಯ ಅಭಿವೃದ್ಧಿ, ಏಳಿಗೆ ಮತ್ತು ಉಳಿಸುವಿಕೆಗಾಗಿ ಭಾರತ ಸರ್ಕಾರ, ವಸ್ತ್ರಮಂತ್ರಾಲಯದ ಕರಕುಶಲ ಅಭಿವೃದ್ಧಿ ಆಯುಕ್ತರ ಕಛೇರಿಯು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುತ್ತಿದೆ ಮತ್ತು ಕರಕುಶಲ ಕಲೆಯ ಅಭಿವೃಧ್ದಿ, ವಿನ್ಯಾಸ ಹಾಗೂ ಕಲ್ಯಾಣಕ್ಕಾಗಿ ಹಲವಾರು ಯೋಜನೆಗೆಳನ್ನು ಕಾರ್ಯಗತಗೊಳಿಸುತ್ತಿದೆ.  ಕರಕುಶಲ ಅಭಿವೃದ್ಧಿ ಆಯುಕ್ತರ ಅಛೇರಿಯುಕುಶಲಕರ್ಮಿಗಳಿಗೆ ನೇರ ಮಾರುಕಟ್ಟೆಯನ್ನು ಒದಗಿಸಲು ಪ್ರತಿ ವರ್ಷ ಸುಮಾರು 300 ಪ್ರದರ್ಶನ ಹಾಗೂ ಮಾರುಕಟ್ಟೆ ಕಾರ್ಯಕ್ರಮಗಳನ್ನುಆಯೋಜಿಸುತ್ತಿದ್ದಾರೆ. ಇವುಗಳಲ್ಲಿ ಒಂದಾದ ಗಾಂಧಿಶಿಲ್ಪ ಬಜಾರ್ ಮೈಸೂರಿನಲ್ಲಿ ಈಗ ಆಯೋಜಿಸಲಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಭಾಗವಹಿಸುವ ಕುಶಲ ಕರ್ಮಿಗಳಿಗೆ, ಮೈಸೂರಿನ ಕಲಾಪ್ರೇಮಿಗಳ ಜೊತೆ ನೇರಮಾರುಕಟ್ಟೆ ವೇದಿಕೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಭಾಗವಹಿಸುವ ಕುಶಲಕರ್ಮಿಗಳು ಬಳಕೆದಾರರ ನಿಜವಾದ ಅಗತ್ಯತೆ ಮತ್ತು ಅಭಿರುಚಿಯನ್ನು ತಿಳಿದುಕೊಂಡು ಮಾರುಕಟ್ಟೆಗೆ ಬೇಕಾದ ನವೀನ ವಿನ್ಯಾಸದ ವಸ್ತುಗಳನ್ನು ರೂಪಿಸಿಕೊಳ್ಳಬಹುದಾಗಿದೆ. ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿ ವಿಜೇತರು ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಕುಶಲಕರ್ಮಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಅವರು ತಮ್ಮ ಉತ್ಕೃಷ್ಟ ಕಲಾವಸ್ತುಗಳನ್ನು ಐತಿಹಾಸಿಕ ಮೈಸೂರಿನ ಕಲಾಪ್ರೇಮಿಗಳಿಗೆ ಪ್ರದರ್ಶಿಸಲಿದ್ದಾರೆ.

ಈ ಪ್ರದರ್ಶನ ಹಾಗೂ ಮಾರಾಟಕ್ಕಿರುವ ವಸ್ತುಗಳಲ್ಲಿ ಮುಖ್ಯವಾದವುಗಳೆಂದರೆ, ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಟೆರ್ರಾ ಕೊಟ್ಟ, ಪೇಪರ್ ಮೆಷೀ, ರತ್ನ ಕಂಬಳಿ, ಹತ್ತಿ ಜಮಕಾನ, ಅನುಕರಣೆ ಆಭರಣಗಳು,ಮರದ ಅರಗಿನ ಕಲಾವಸ್ತುಗಳು, ಬಾಟಿಕ್, ಕಲಾಂಕರಿ ಚಿತ್ರಕಲೆ, ಚರ್ಮದ ಆಕರ್ಷಕ ವಸ್ತುಗಳು, ತಂಜಾವೂರು/ಮೈಸೂರು ಶೈಲಿಯ ಚಿತ್ರಕಲೆ, ಕಲಾತ್ಮಕ ಚರ್ಮದ  ಚಪ್ಪಲಿಗಳು, ವರ್ಣಮಯ ಗೊಂಬೆಗಳು, ಕಛ್ ಪ್ರದೇಶದ ಕಸೂತಿ, ಛತ್ತೀಸ್ ಗಡದ ದೋಕ್ರಾ ಎರಕದ ವಸ್ತುಗಳು, ಚಂದೇರಿ/ಪಟೋಲ ಸೀರೆಗಳು,ಪಟ ಚಿತ್ರ, ಬೆಳ್ಳಿಯ ಸೂಕ್ಷ್ಮ ವಿನ್ಯಾಸ ವಸ್ತುಗಳು, ಶೀತಲ ಪಟ್ಟಿ, ಬಿದಿರು-ಬೆತ್ತದ ವಸ್ತುಗಳು, ಪೂರ್ವೋತ್ತರದ ಅಲ೦ಕಾರಿಕ ಒಣ ಹೂಗಳು, ಚಿಕನ್ ಎಂಬ್ರಾಯಿಡರಿ, ಜಮಖಾನ, ಉತ್ತರ ಪ್ರದೇಶದ ಕಲಾತ್ಮಕ ಲೋಹದ ವಸ್ತುಗಳು, ಕಲಾತ್ಮಕ ಕಲ್ಲಿನ ವಸ್ತುಗಳು, ಮುದ್ರಿತ ಜವಳಿ, ಬಿಹಾರದ ಮಧುಬನಿ ಚಿತ್ರಕಲೆ, ಫೂಲಕಾರಿ, ಅರಗಿನ ಬಳೆಗಳು ಹಾಗೂ ಇನ್ನಿತರ ಕಲಾತ್ಮಕ ವಸ್ತುಗಳು ಪ್ರದಶ೯ನ ಹಾಗೂ ಮಾರಾಟಕ್ಕೆ  ವಿದೆ.

ಈ ಪ್ರದರ್ಶನದಲ್ಲಿ ಮಧ್ಯವರ್ತಿಗಳಿಲ್ಲದೆ, ಕುಶಲಕರ್ಮಿಗಳಿಂದ ನೇರವಾಗಿ ಖರೀದಿದಾರರಿಗೆ ಮಾರಾಟದ ವ್ಯವಸ್ತೆ ಕಲ್ಪಿಸಲಾಗಿದೆ. ಈ ಪ್ರದರ್ಶಿನದಲ್ಲಿ ನೊಂದಾಯಿತ ಕುಶಲಕಮಿ೯ಗಳಿಗೆ ಉಚಿತವಾಗಿ ಮಳಿಗೆಗಳನ್ನು ನೀಡಲಾಗುವುದು, ಜೊತೆಗೆ ಪ್ರಯಾಣ ಭತ್ಯೆ ಹಾಗೂ ರವಾನೆ ಶುಲ್ಕವನ್ನು ಕರಕುಶಲ ಅಭಿವೃದ್ಧಿ ಆಯುಕ್ತರ ಕಛೇರಿಯಿಂದ ನೀಡಲಾಗುವುದು. ಭಾರತದಾದ್ಯಂತ ತಯಾರಿಸಲ್ಪಟ್ಟ ವಿಭಿನ್ನ, ವೈಶಿಷ್ಟ್ಯಪೂರ್ಣವಾದ ಕರಕುಶಲ ಕಲೆಯನ್ನು ಒಂದೇ ಸೂರಿನಡಿಯಲ್ಲಿ ನೋಡಿ ಖರೀದಿಸಲು ಮೈಸೂರಿನ ಕಲಾಪ್ರೇಮಿಗಳಿಗೆ ಒಂದು ಸುವರ್ಣವಕಾಶವಾಗಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು  22.10.2021ರ ಶುಕ್ರವಾರದಂದು ಸಂಜೆ 4  ಗಂಟೆಗೆ  ಮೈಸೂರಿನ ಸಂಸದ ಪ್ರತಾಪಸಿಂಹ   ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರು ಮತ್ತು ಮಾಜಿ ಸಚಿವರಾದ  ಜಿ,ಟಿ.ದೇವೇಗೌಡರು ಇವರು ವಹಿಸಲಿದ್ದಾರೆ.   ಎಚ್.ವಿ. ರಾಜೀವ್, ಅಧ್ಯಕ್ಷರು, ಮೈಸೂರು ನಗರಾಭಿವೃದ್ಧಿ ಪ್ರಾಧೀಕಾರ  .ಡಾ.ಸಿ.ಜಿ.ಬೆಟಸೂರಮಠ, ಕಾರ್ಯನಿರ್ವಾಹಕ ಕಾರ್ಯದರ್ಶಿಗಳು, ಜೆಎಸ್‍ಎಸ್ ಮಹಾವಿದ್ಯಾಪೀಠ,  .ಕೆ.ಆರ್.ಸಂತಾನಂ, ನಿರ್ದೇಶಕರು, ಲೆಕ್ಕ ಪರಿಶೋಧಕ ಮತ್ತು ಲೆಕ್ಕ ವಿಭಾಗ, ಜೆಎಸ್‍ಎಸ್ ಮಹಾವಿದ್ಯಾಪೀಠ, ಡಾ.ಎಚ್.ಆರ್. ಮಹದೇವಸ್ವಾಮಿ, ಜಂಟಿ ನಿರ್ದೇಶಕರು, ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗ, ಜೆಎಸ್‍ಎಸ್ ಮಹಾವಿದ್ಯಾಪೀಠ, ಹಾಗೂ   ಕೆ.ಎಸ್. ಸುನೀಲ್‍ಕುಮಾರ್ ಸಹಾಯಕ ನಿರ್ದೇಶಕರು(ಹಸ್ತಶಿಲ್ಪ), ಕರಕುಶಲ ಸೇವಾ ಕೇಂದ್ರ, ಮೈಸೂರು ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಪ್ರದರ್ಶನ ಹಾಗೂ ಮಾರಾಟ  22.10.2021ರಿಂದ 31.10.2021 ರವರೆಗೆ ಬೆಳಿಗ್ಗೆ 10.30ಗಂಟಿಯಿಂದ ರಾತ್ರಿ9 ರ ತನಕ ತೆರೆದಿರುತ್ತದೆ.

Leave a Reply

comments

Related Articles

error: