ಮೈಸೂರು

60 ವರ್ಷದಲ್ಲಿ ಮುಸ್ಲಿಂ ಸಮುದಾಯಕ್ಕೆ ದೊಡ್ಡ ಹುದ್ದೆ ನೀಡಲು ಆಗದ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಗೆ ಸವಾಲು ಹಾಕುವ ನೈತಿಕತೆ ಇಲ್ಲ : ಕೆ.ಟಿ.ಚಲುವೇಗೌಡ

ಮೈಸೂರು,ಅ.19:- ಅರವತ್ತು ವರ್ಷದಲ್ಲಿ ಮುಸ್ಲಿಂ ಸಮುದಾಯಕ್ಕೆ ದೊಡ್ಡ ಹುದ್ದೆ ನೀಡಲು ಆಗದ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಪಕ್ಷಕ್ಕೆ ಸವಾಲು ಹಾಕುವ ನೈತಿಕತೆ ಇದೆಯಾ ಎಂದು ಮೈಸೂರು ನಗರ(ಜಿಲ್ಲೆ)ಜನತಾದಳ(ಜಾತ್ಯಾತೀತ) ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ ಪ್ರಶ್ನಿಸಿದರು.

ಮೈಸೂರಿನ ಜೆಡಿಎಸ್ ಪಕ್ಷದ ಕಛೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಾಜಿ ಮಹಾಪೌರರಾದ ಆರೀಫ್ ಹುಸೇನ್ ಅವರೇ ನೀವು ಜೆಡಿಎಸ್ ಅಲ್ಪ ಸಂಖ್ಯಾತರಿಗೆ ಯಾವ ಕೊಡುಗೆ ಕೊಟ್ಟಿದೆ ಎಂದು ಪ್ರಶ್ನೆ ಮಾಡುತ್ತೀರಿ, ಇಂದು ನಿಮ್ಮ ಹೆಸರ ಜೊತೆ ಮಾಜಿ ಮೇಯರ್ ಎಂದು ಬರೆಯಲು ಸಾಧ್ಯವಾಗಿದ್ದು ಇದೇ ಜೆಡಿಎಸ್ ಪಕ್ಷದಿಂದ ಎಂಬುದನ್ನು ಮರೆಯಬೇಡಿ. ಎನ್.ಆರ್.ಕ್ಷೇತ್ರದ ಶಾಸಕರಾಗಬೇಕು. ವಿಧಾನಪರಿಷತ್ ಸದಸ್ಯರಾಗಬೇಕು ಎಂಬ ಆಲೋಚನೆಯಿಂದ ನಿಮ್ಮ ನಾಯಕರನ್ನು ಓಲೈಸುವ ಕಾರ್ಯ ಮಾಡುತ್ತಿದ್ದೀರ ಎಂದು ಗೊತ್ತು. ಆದರೆ ನೀವು ಬೆಳೆದದ್ದು ಇದೇ ಜಾತ್ಯಾತೀತ ಪಕ್ಷದಿಂದ ಎಂಬುದನ್ನು ಟೀಕಿಸುವ ಮುನ್ನ ಮರೆಯದಿರಿ ಎಂದು ನೆನಪಿಸಿದರು.

ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೆ ಮುಸ್ಲಿಂರನ್ನು  ಸಿಎಂ, ಡಿಸಿಎಂ ಪಕ್ಷದ ಅಧ್ಯಕ್ಷ ಅಥವಾ ಗೃಹಸಚಿವರನ್ನಾಗಿ ಮಾಡಿದೆಯಾ? ಜಮೀರ್ ಅಹ್ಮದ್ ಜೆಡಿಎಸ್ ಪಕ್ಷದಿಂದ ಶಾಸಕರಾಗಿ, ಸಚಿವರಾಗಿ ಕುಮಾರಸ್ವಾಮಿಯವರ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸಿದರು. ಇದೀಗ ಕಾಂಗ್ರೆಸ್ ಸೇರಿಕೊಂಡು ಕುಮಾರಣ್ಣನವರ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇವರೆಲ್ಲ ಮನವರಿಕೆ ಮಾಡಿಕೊಳ್ಳಬೇಕು. ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಏನು ಕೊಡುಗೆ ನೀಡಿದೆ ಎಂಬುದರ ಕುರಿತು ಮನವರಿಕೆ ಮಾಡಿಕೊಳ್ಳಲಿ ಎಂದರು.

ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನು ಸಿಎಂ ಮಾಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದರೆ ತಮ್ಮದೇನೂ ಆಕ್ಷೇಪವಿಲ್ಲ. ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಮಾಡಲಿ ಎಂದು ಜಮೀರ್ ಅವರೇ ಹೇಳಿದ್ದಾರೆ. ಬೇರೆಯವರನ್ನು ಸಿಎಂ ಮಾಡುವುದಕ್ಕಿಂತ ಜಮೀರ್ ಅವರೇ ಸಿಎಂ ಆಗಲಿ. 60ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಕೈಯಲ್ಲಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಓರ್ವ ಮುಸ್ಲಿಂ ಮಹಿಳಾ ಮೇಯರ್ ಮಾಡಲು ಆಗಿರಲಿಲ್ಲ. ಇದು ಸಾಧ್ಯವಾಗಿದ್ದು ಜೆಡಿಎಸ್ ನಿಂದ ಎಂಬುದನ್ನು ಆರೀಫ್ ಹುಸೇನ್ ಅರಿಯಬೇಕು. ಮೈಸೂರು ಜಿಲ್ಲಾ ಪಂಚಾಯತ್ ಗೆ ಮೊದಲ ಮಹಿಳಾ ಮುಸ್ಲಿಂ ಅಧ್ಯಕ್ಷೆ ನೇಮಿಸಿದ್ದು ಜೆಡಿಎಸ್. ನಿಮ್ಮ ಕಾಂಗ್ರೆಸ್ ನಲ್ಲಿರುವ ಬಹುತೇಕ ನಾಯಕರ ಹುಟ್ಟಿಗೆ ಕಾರಣ ಜೆಡಿಎಸ್ ಎಂಬುದನ್ನು ಮರೆಯಬೇ. ಡಿರೆಕ್ಕೆ ಬಲಿತ ಮೇಲೆ ಗೂಡಿನಿಂದ ಹಾರಿಹೋದ ಹಕ್ಕಿಗಳು ನೀವು. ಈಗ ಗೂಡಿನ ಮೇಲೆ ಅಸಹ್ಯ ಮಾಡಲು ಬಂದಿರುವುದು ನಾಚಿಕೆಗೇಡಿನ ವಿಷಯ ಎಂದು ಕಿಡಿಕಾರಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: