ಮೈಸೂರು

ಮತದಾರರ ಪಟ್ಟಿಗೆ ಸೇರಲು ಅರ್ಜಿ ವಿತರಣೆ

ಮೈಸೂರು,ಅ.19:- ಮೈಸೂರಿನ 23ನೇ ವಾರ್ಡಿನ ದೇವರಾಜ ಮೊಹಲ್ಲಾದ ತಮ್ಮಯ್ಯನ ಮಠ ರಸ್ತೆಯಲ್ಲಿ ಮುಡಾ ಸದಸ್ಯರಾದ ನವೀನ್ ಕುಮಾರ್ ಅವರು ಮನೆ ಮನೆಗೆ ತೆರಳಿ ವಿಧಾನ ಪರಿಷತ್ ಗೆ 2022ರ ಜೂನ್ ನಲ್ಲಿ ನಡೆಯಲಿರುವ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಗೆ ಮತದಾರರ ಪಟ್ಟಿಗೆ  ನೋಂದಾಯಿಸಲು ಬೇಕಾದ ಅರ್ಜಿಯನ್ನು ಫಲಾನುಭವಿಗಳಿಗೆ ನೀಡಿದರು.

ಅರ್ಜಿಗೆ  ಬೇಕಾದ ದಾಖಲಾತಿಗಳ ವಿವರವನ್ನು ನೀಡಿದರು. ಈ ಸಂದರ್ಭದಲ್ಲಿ ನವೀನ್, ನಿತಿನ್, ಶಿವಕುಮಾರ್ ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: