ಮೈಸೂರು

ಕೋವಿಡ್ ಲಸಿಕೆ ಪಡೆಯದವರು ಪಡೆಯುವಂತೆ ಮನವಿ

ಮೈಸೂರು,ಅ.19:- ಕೋವಿಡ್-19 ಸೋಂಕಿನ ನಿಯಂತ್ರಣದ ಭಾಗವಾಗಿ ಭಾರತ ಸರ್ಕಾರ ಪರಿಚಯಿಸಿದ ಲಸಿಕೆಯನ್ನು ಮೈಸೂರು ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೊದಲ ಹಾಗೂ ಎರಡನೇ ವರಸೆ ಪಡೆದು ಕೋವಿಡ್ ಸೋಂಕು ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿರುವುದಕ್ಕೆ ಜಿಲ್ಲಾ ಪಂಚಾಯತ್ ಮೈಸೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಮೈಸೂರು ಅಭಿನಂದಿಸಿದೆ.

ಜಿಲ್ಲೆಯ ಹಲವು ಅರ್ಹ ಫಲಾನುಭವಿಗಳು, ವಿಶೇಷವಾಗಿ ನಗರ ಹಾಗೂ ಪಟ್ಟಣ ಪ್ರದೇಶದ ನಿವಾಸಿಗಳು ಮೊದಲ ಡೋಸ್ ಮತ್ತು ಎರಡನೇ ಡೋಸ್ ಪಡೆಯದಿರುವುದು ಕಂಡು ಬಂದಿದ್ದು ಅರ್ಹ ಫಲಾನುಭವಿಗಳು ಕೂಡಲೇ ತಮ್ಮ ಸಮೀಪದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಪಡೆಯುವುದರ ಜೊತೆಗೆ ಪಡೆಯದಿರುವವರನ್ನು ಸಹ ಪ್ರೇರೇಪಿಸಿ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸಿ ಕೋವಿಡ್-19 ಸೋಂಕಿನ ಸಂಪೂರ್ಣ ಹಿಡಿತ ಸಾಧಿಸಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: