ದೇಶಪ್ರಮುಖ ಸುದ್ದಿಮನರಂಜನೆ

  ಬಾಲಿವುಡ್ ನಟಿ ಕಂಗನಾ ರಾಣಾವತ್ ಅಭಿನಯದ ‘ಧಾಕಡ್’ ಚಿತ್ರ ಮುಂದಿನ ವರ್ಷ ತೆರೆಗೆ  

ದೇಶ(ಮುಂಬೈ)ಅ.19:- ತಲೈವಿಯಲ್ಲಿ ತನ್ನ ನಟನಾ ಸಾಮರ್ಥ್ಯವನ್ನು ತೋರಿಸಿದ ನಂತರ, ನಟಿ ಕಂಗನಾ ರಾಣಾವತ್ ತನ್ನ ಹೊಸ ಚಿತ್ರಕ್ಕೆ ಸಿದ್ಧರಾಗಿದ್ದಾರೆ. ಅವರ ಮುಂದಿನ ಚಿತ್ರ ‘ಧಾಕಡ್’ ಬಿಡುಗಡೆಯ ದಿನಾಂಕ ಬಹಿರಂಗಗೊಂಡಿದೆ. ಮುಂದಿನ ವರ್ಷ ಅಂದರೆ ಏಪ್ರಿಲ್ 8, 2022 ರಂದು ಚಿತ್ರವು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಕಂಗನಾ ತನ್ನ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತಿಳಿಸಿದ್ದಾರೆ.

ಕಂಗನಾ ತನ್ನ ಇನ್‌ ಸ್ಟಾಗ್ರಾಮ್‌ ನಲ್ಲಿ ಚಿತ್ರಗಳ ಕೊಲಾಜ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ, ಕಂಗನಾ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಹಂಚಿಕೊಂಡು ಅವರು   ಭಯಂಕರ, ಶಕ್ತಿಶಾಲಿ ಮತ್ತು ನಿರ್ಭೀತ ಎಂದು ಬರೆದುಕೊಂಡಿದ್ದಾರೆ. ಅಗ್ನಿ ಬೃಹತ್ ಪರದೆಯಲ್ಲಿ ಬೆಂಕಿ ಹೊತ್ತಿಸಲು ಸಜ್ಜಾಗಿದೆ. ಆಕ್ಷನ್ ಸ್ಪೈ ಥ್ರಿಲ್ಲರ್ ‘ಧಕಾಡ್’ ಏಪ್ರಿಲ್ 8, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: