ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಮೈಮೇಲೆ ಪ್ರಜ್ಞೆ ಬೇಡ್ವಾ ..? : ಅಭಿಮಾನಿಗಳನ್ನು ಗದರಿದ ಚಾಲೆಂಜಿಂಗ್ ಸ್ಟಾರ್

ರಾಜ್ಯ(ಚಾಮರಾಜನಗರ), ಅ.19:-ಬೈಕ್ ನಲ್ಲಿ ತಮ್ಮನ್ನು ಹಿಂಬಾಲಿಸಿಕೊಂಡು ಬಂದ ಅಭಿಮಾನಿಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್  ಪ್ರೀತಿಯಿಂದಲೇ ಗದರಿ ಬುದ್ಧಿಮಾತು ಹೇಳಿದ  ಘಟನೆ  ನಡೆದಿದ್ದು, ಇದೀಗ ವಿಡಿಯೋ  ಫುಲ್ ವೈರಲ್ ಆಗಿದೆ.

ಜೀಪ್‌ ನಲ್ಲಿ ತೆರಳುತ್ತಿದ್ದಾಗ ತನ್ನನ್ನು ವೇಗವಾಗಿ ಹಿಂಬಾಲಿಸಿಕೊಂಡು ಬಂದ ಅಭಿಮಾನಿಗಳನ್ನು ನಟ ದರ್ಶನ್ ತರಾಟೆಗೆ ತೆಗೆದುಕೊಂಡಿದ್ದಾರೆ.  ಏನು ರೋಡ್ ಲ್ಲಿ ಆಟ ಆಡ್ತಾ ಇದ್ದೀರಾ?  ಮೈಮೇಲೆ ಪ್ರಜ್ಞೆ ಬೇಡ್ವಾ? ಮತ್ತೆ ಮತ್ತೆ ಬರ್ತಾ ಇದ್ದೀರಲ್ಲ, ಹೇಳಿದ್ರೂ ಕೇಳಲ್ವಾ?  ಲೋ ನಿನಗೆ ಕಣೋ ಹೇಳ್ತಿರೋದು ಎಂದು ಗದರಿದ್ದು, ಅವರು ಬೈಯ್ಯುತ್ತಿದ್ದರೂ ಅಭಿಮಾನಿಗಳು ಅಲ್ಲಿಯೇ ಬಾಸ್ ಬಾಸ್ ಎಂದು ಕೂಗಿದ್ದಾರೆ.  ಅಪಾಯವನ್ನೂ ಲೆಕ್ಕಿಸದೇ ವೇಗವಾಗಿ ಬೈಕ್‌ ನಲ್ಲಿ ಬರುತ್ತಿದ್ದ ಅಭಿಮಾನಿಗಳಿಗೆ ಎಚ್ಚರಿಕೆಯ ಬುದ್ದಿಮಾತುಗಳನ್ನು ಹೇಳಿದ್ದಾರೆ.

ಅಭಿಮಾನಿಗಳು ಅಪಾಯವನ್ನೂ ಲೆಕ್ಕಿಸದೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್‌ ಚಲಾಯಿಸಿಕೊಂಡು ಬರುತ್ತಿರುವುದನ್ನು  ಕಂಡು ನಟ   ಗರಂ ಆಗಿದ್ದರು. ಅವರು ಬುದ್ಧಿಮಾತು ಹೇಳಿ ಗದರುತ್ತ ಜೀಪ್ ಚಲಾಯಿಸಿಕೊಂಡು ಹೋಗುತ್ತಿರುವುದು, ಹಿಂದೆಯೇ ಅವರನ್ನು ಹಿಂಬಾಲಿಸಿ  ಅಭಿಮಾನಿಗಳು ʻಬಾಸ್‌ʼ ಎಂದು ಕೂಗಿಕೊಂಡು ಬೈಕ್‌ ನಲ್ಲಿ ಬರುತ್ತಿರುವ ದೃಶ್ಯದ ವಿಡಿಯೊ ಇದೀಗ ಎಲ್ಲೆಡೆ ಸಖತ್ ವೈರಲ್‌ ಆಗಿದೆ.  ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಒಡೆಯರ ಪಾಳ್ಯಕ್ಕೆ  ಬಂದ ವೇಳೆಯಲ್ಲಿಯೇ ನಡೆದಿದೆ ಎನ್ನಲಾದ ವಿಡಿಯೋ ಇದು ಎನ್ನಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: