ಕ್ರೀಡೆಪ್ರಮುಖ ಸುದ್ದಿ

 ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಇಶಾನ್ :  7 ವಿಕೆಟ್ ಗಳಿಂದ ಇಂಗ್ಲೆಂಡ್ ನ್ನು ಸೋಲಿಸಿದ ಭಾರತ

ದೇಶ(ನವದೆಹಲಿ),ಅ.19:- ಟಿ-20ವರ್ಲ್ಡ್ ಕಪ್ ನ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ 7 ವಿಕೆಟ್ ಗಳಿಂದ ಸೋಲಿಸಿತು.

ಮೊದಲು ಆಡಿದ ಇಂಗ್ಲೆಂಡ್ 188/5 ಸ್ಕೋರ್ ಮಾಡುವ ಮೂಲಕ 189 ರನ್ ಗಳ ಗುರಿಯನ್ನು ಟೀಂ ಇಂಡಿಯಾ ನಾಯಕ ವಿರಾಟ್ ತಂಡಕ್ಕೆ ನೀಡಿತ್ತು.  ವಿರಾಟ್ ಮತ್ತು ತಂಡ ಒಂದು ಓವರ್ ಗಿಂತ ಮೊದಲೇ  3 ವಿಕೆಟ್ ನಷ್ಟಕ್ಕೆ ಗೆಲುವು  ಸಾಧಿಸಿದೆ. ಪಂದ್ಯವನ್ನು ಗೆಲ್ಲುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಆದರೆ ಮತ್ತೊಮ್ಮೆ ಹಾರ್ದಿಕ್ ಪಾಂಡ್ಯ ಪಂದ್ಯದಲ್ಲಿ ಬೌಲಿಂಗ್ ಮಾಡುವುದನ್ನು ಕಾಣಲಾಗಲಿಲ್ಲ. ಇದರೊಂದಿಗೆ ರಾಹುಲ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್ ಅವರ ಫಾರ್ಮ್ ಕೂಡ ಕ್ಯಾಪ್ಟನ್ ಕೊಹ್ಲಿಗೆ ತೊಂದರೆ ಹೆಚ್ಚಿಸಿದೆ.

ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿತ್ತು. ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಮೊದಲ ವಿಕೆಟ್ ಗೆ 50 ಎಸೆತಗಳಲ್ಲಿ 82 ರನ್ ಪೇರಿಸಿದರು. ಉತ್ತಮ ಲಯದಲ್ಲಿ ಕಾಣಿಸಿಕೊಂಡ ರಾಹುಲ್  23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು, ಆದರೆ ಮುಂದಿನ ಎಸೆತದಲ್ಲಿ   ಔಟ್ ಆಗಿ ಪೆವಿಲಿಯನ್ ಗೆ ಮರಳಿದರು.   ಮಾರ್ಕ್ ವುಡ್   ವಿಕೆಟ್ ಪಡೆದಿದ್ದರು. ನಾಯಕ ವಿರಾಟ್ ಕೊಹ್ಲಿ (11) ಮತ್ತು ಸೂರ್ಯಕುಮಾರ್ ಯಾದವ್ (8) ಪಡೆಯುವ ಮೂಲಕ ನಿರಾಶರಾಗಿ ಪೆವಿಲಿಯನ್ ಗೆ ಮರಳಿದರು. ರಿಷಭ್ ಪಂತ್ 14 ಎಸೆತಗಳಲ್ಲಿ ಅಜೇಯ (29) ಮತ್ತು ಹಾರ್ದಿಕ್ ಪಾಂಡ್ಯ 10 ಎಸೆತಗಳಲ್ಲಿ ಅಜೇಯ (12) ರನ್ ಗಳಿಸಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: