ಮೈಸೂರು

ಗ್ರಂಥಾಲಯ ಸುಟ್ಟು ಹೋಗಿ 6ತಿಂಗಳು : ಇನ್ನೂ ಕಟ್ಟಿಸಿಕೊಡದ ಸರ್ಕಾರದ ವಿರುದ್ಧ ಸೈಯದ್ ಇಸಾಕ್ ಬೇಸರ

ಮೈಸೂರು,ಅ.19:- ಮೈಸೂರು ಜಿಲ್ಲೆ ರಾಜೀವ್ ನಗರದಲ್ಲಿ  ಸೈಯದ್ ಇಸಾಕ್ ಅವರು  ಕಳೆದ 11 ವರ್ಷದಿಂದ ಗ್ರಂಥಾಲಯ ನಡೆಸಿಕೊಂಡು ಬರುತ್ತಿದ್ದಾರೆ. 10 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಇಸಾಕ್ ಸಂಗ್ರಹಿಸಿದ್ದಾರೆ. ಆದರೆ ಅವರ ಗ್ರಂಥಾಲಯ ಸುಟ್ಟು ಹೋಗಿತ್ತು. ಸುಟ್ಟುಹೋದ ಗ್ರಂಥಾಲಯವನ್ನು ಆರು ತಿಂಗಳಾದರೂ  ಸರ್ಕಾರ ಕಟ್ಟಿಸಿಲ್ಲವೆಂದು ಸರ್ಕಾರದ  ವಿರುದ್ಧ ಗ್ರಂಥಾಲಯದ ಮಾಲೀಕರಾದ ಸೈಯದ್ ಇಸಾಕ್ ಬೇಸರ ವ್ಯಕ್ತಪಡಿಸಿದ್ದಾರೆ.

ಆರು ತಿಂಗಳ ಹಿಂದೆ   ಸೈಯದ್ ಇಸಾಕ್ ಅವರ ಗ್ರಂಥಾಲಯ ಸುಟ್ಟು ಹೋಗಿತ್ತು.  ಈ ವೇಳೆ ಹಲವರು ಗ್ರಂಥಾಲಯ ಕಟ್ಟಿಕೊಡಲು ಮುಂದಾಗಿದ್ದರು. ಆದರೆ ಸರ್ಕಾರ ತಾವೇ ಗ್ರಂಥಾಲಯ ಕಟ್ಟಿಸಿಕೊಡುವುದಾಗಿ ಹೇಳಿತ್ತು. ಹೀಗೆ ಭರವಸೆಕೊಟ್ಟು 6 ತಿಂಗಳಾದರೂ ಈ ಬಗ್ಗೆ ಸರ್ಕಾರ ಗಮನಹರಿಸಿಲ್ಲ.

ಘಟನೆ ನಡೆದು ಆರು ತಿಂಗಳು ಕಳೆದರೂ ಇನ್ನು ಕಟ್ಟಡ ಕಾಮಗಾರಿ ಪ್ರಾರಂಭವಾಗಿಲ್ಲ.   ಪ್ರತಿದಿನ ಮರದಡಿ ಪುಸ್ತಕ ಹಾಗೂ ದಿನಪತ್ರಿಕೆಯನ್ನು ಇಟ್ಟುಕೊಂಡು ಸೈಯದ್ ಇಸಾಕ್‌ ಗ್ರಂಥಾಲಯ ನಡೆಸುತ್ತಿದ್ದಾರೆ.

ಮಳೆ ಬಂದರೆ ಇಡೀ ಪುಸ್ತಕಗಳನ್ನು ಚೀಲಕ್ಕೆ ತುಂಬಿಕೊಂಡು ಓಡುವ ಪರಿಸ್ಥಿತಿ ಇದೆ.  ಸೂರಿಲ್ಲದೆ ಸೈಯದ್ ಇಸಾಕ್‌ ಪರದಾಡುತ್ತಿದ್ದಾರೆ. ಗ್ರಂಥಾಲಯ ಕಟ್ಟಿಸಿಕೊಡದಿದ್ದರೆ ತಾವೇ ಮತ್ತೆ ಹಳೆ ಮಾದರಿಯಲ್ಲಿ ಶೆಡ್ ಹಾಕಿಕೊಳ್ಳುವುದಾಗಿ ಸೈಯದ್ ಇಸಾಕ್ ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: