ಮೈಸೂರು

ಜನವಸತಿ ಪ್ರದೇಶದಲ್ಲಿ ಚಿರತೆ ಸಂಚಾರ : ಜನರಲ್ಲಿ ಆತಂಕ

ಮೈಸೂರು,ಅ.19:- ಮೈಸೂರಿನ ಜನವಸತಿ ಪ್ರದೇಶದಲ್ಲಿ ಚಿರತೆ ಸಂಚಾರ ಮಾಡಿ ಜನರಲ್ಲಿ ಆತಂಕ ಉಂಟು ಮಾಡಿದೆ.

ನಗರದ ವಿವೇಕಾನಂದ ವೃತ ಹಾಗೂ ಭ್ರಮಾರಂಭ ಚೌಲ್ಟ್ರಿಯ ಮಧ್ಯಭಾಗದಲ್ಲಿರುವ ಮಧುವನ ಬಡಾವಣೆಯ ಒಂದನೇ ಬ್ಲಾಕ್ ನಲ್ಲಿ ಇತ್ತೀಚೆಗೆ 3.30 ರ ನಸುಕಿನ ಮುಂಜಾನೆ ಚಿರತೆ ಸಂಚಾರ ಮಾಡಿದೆ. ಬಡಾವಣೆಯ ನಿವಾಸಿಯೊಬ್ಬರು ಮುಂಜಾನೆಯ ಪಾಳಿಯ ಕೆಲಸಕ್ಕೆ ಹೋಗಲು ಬಾಗಿಲು ತೆರೆದಾಗ ಮನೆಮುಂದೆ ಚಿರತೆ ಸಂಚರಿಸುತ್ತಿರುವುದನ್ನು ನೋಡಿ ಆತಂಕಗೊಂಡು ನಂತರ ಸಿಸಿ ಕ್ಯಾಮೆರಾದ ವೀಡಿಯೊ ಪರಿಶೀಲಿಸಿದಾಗ ಚಿರತೆಯ ಚಲನವಲನ ನೋಡಿ ದಿಗ್ಭ್ರಮೆಗೊಂಡರು.

ನಂತರ ವಿವಿಧ ಮನೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದ ಫೂಟೇಜ್ ನಲ್ಲೂ ಚಿರತೆಯ ಚಲನವಲನ ಕಂಡು ಬಂದಿದ್ದು. ಪಕ್ಕದಲ್ಲಿರುವ ಲಿಂಗಾಬುಧಿ ಪಾರ್ಕ್ ನಿಂದ ಚಿರತೆ ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಚಿರತೆ ಸಂಚರಿಸಿರುವುದು ಶ್ರೀರಾಂಪುರದ ನಿವಾಸಿಗಳಿಗೂ ಹಾಗೂ ಲಿಂಗಾಬುಧಿ ಪಾರ್ಕ್‌ ವಾಯು ವಿಹಾರಿಗಳಿಗೆ ಆತಂಕ ಉಂಟು ಮಾಡಿದೆ. ಇಂದು ಬೆಳಿಗ್ಗೆ ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: