ಕ್ರೀಡೆದೇಶಪ್ರಮುಖ ಸುದ್ದಿ

 ‘ಟಿ-20 ವಿಶ್ವಕಪ್‌ ನಲ್ಲಿ ಧೋನಿ ಉಪಸ್ಥಿತಿ ಟೀಮ್‌ ಇಂಡಿಯಾಗೆ ಹೆಚ್ಚು ಅನುಕೂಲ : ಗೌತಮ್ ಗಂಭೀರ್ ಅಭಿಮತ

ದೇಶ( ನವದೆಹಲಿ)ಅ.20:- ಅಪಾರ ಅನುಭವ ಹೊಂದಿರುವ ಧೋನಿ ಅವರು   ‘ಟಿ-20 ವಿಶ್ವಕಪ್‌ ನಲ್ಲಿ  ಉಪಸ್ಥಿತರಿರುವುದು  ಟೀಮ್‌ ಇಂಡಿಯಾಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಟಿ-20 ವಿಶ್ವಕಪ್‌ ನಲ್ಲಿ ಎಂ.ಎಸ್‌.ಧೋನಿ ಅವರ ಅನುಭವ ಟೀಮ್‌ ಇಂಡಿಯಾಗೆ ಹೆಚ್ಚು ನೆರವಾಗಲಿದೆ. ಟೀಮ್ ಇಂಡಿಯಾದ ಮಾರ್ಗದರ್ಶಕರಾಗಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ನೇಮಕ ಮಾಡಿರುವುದು ತಂಡಕ್ಕೆ ಮತ್ತಷ್ಟು ಬಲ ತಂದಿದೆ. 2007ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಚೊಚ್ಚಲ ಟಿ-20 ವಿಶ್ವಕಪ್‌ ಗೆದ್ದಿತ್ತು. ಅಪಾರ ಅನುಭವ ಹೊಂದಿರುವ ಧೋನಿ ಅವರ ಉಪಸ್ಥಿತಿ ಟೀಮ್‌ ಇಂಡಿಯಾಗೆ ಹೆಚ್ಚು ಅನುಕೂಲವಾಗಲಿದೆ. ಜತೆಗೆ ಅವರು ಯುವ ಆಟಗಾರರಿಗೆ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಲಿದ್ದಾರೆ  ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: