ಕ್ರೀಡೆದೇಶಪ್ರಮುಖ ಸುದ್ದಿ

ಟೀಂ ಇಂಡಿಯಾದ ಮಾಜಿ 18 ಕ್ರಿಕೆಟಿಗರಿಗೆ ಮೆರಿಲೆಬೋನ್ ಕ್ರಿಕೆಟ್ ಕ್ಲಬ್ ನ ಆಜೀವ ಸದಸ್ಯತ್ವ

ದೇಶ(ನವದೆಹಲಿ)ಅ.20:- ಟೀಂ ಇಂಡಿಯಾದ ಮಾಜಿ ಆಟಗಾರರಾದ  ಹರ್ಭಜನ್ ಸಿಂಗ್ ಹಾಗೂ ಜಾವಗಲ್ ಶ್ರೀನಾಥ್ ಸೇರಿದಂತೆ 18 ಕ್ರಿಕೆಟಿಗರಿಗೆ   ಮೆರಿಲೆಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ನ ಆಜೀವ ಸದಸ್ಯತ್ವ ನೀಡಲಾಗಿದೆ.

ಹರ್ಭಜನ್ ಹಾಗೂ ಶ್ರೀನಾಥ್ ಇಬ್ಬರೂ ಉತ್ತಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಆನಂದಿಸಿದವರು. ಹರ್ಭಜನ್ ಟೆಸ್ಟ್ ನಲ್ಲಿ ಭಾರತದ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿದ್ದು, 103 ಟೆಸ್ಟ್ ಪಂದ್ಯಗಳಲ್ಲಿ 417 ವಿಕೆಟ್ ಗಳಿಸಿದ್ದಾರೆ ಹಾಗೂ 700 ಕ್ಕೂ ಹೆಚ್ಚು ಅಂತರ್ ರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ.

ಪ್ರಸ್ತುತ ಐಸಿಸಿ ಎಲೈಟ್ ಪ್ಯಾನಲ್ ಮ್ಯಾಚ್ ರೆಫ್ರಿ ಆಗಿರುವ ಕನ್ನಡಿಗ ಶ್ರೀನಾಥ್, 315 ಏಕದಿನ ವಿಕೆಟ್ ಹಾಗೂ 236 ಟೆಸ್ಟ್ ವಿಕೆಟ್ ಪಡೆದಿರುವ ಶ್ರೇಷ್ಠ ವೇಗದ ಬೌಲರ್‌ ಗಳಲ್ಲಿ ಒಬ್ಬರಾಗಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: