ದೇಶಪ್ರಮುಖ ಸುದ್ದಿ

ದೇವೇಂದರ್ ಸಿಂಗ್ ರಾಣಾ ಬೆಂಬಲಿಸಿದ ಮಾಜಿ ಸಚಿವ ಪ್ರೇಮ್ ಸಾಗರ್ ಅಜೀಜ್

ದೇಶ(ಜಮ್ಮು)ಅ.20:-  ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಪ್ರೇಮ್ ಸಾಗರ್ ಅಜೀಜ್   ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ತೊರೆದು  ಇತ್ತೀಚೆಗೆ ಬಿಜೆಪಿಗೆ ಸೇರಿದ ತಮ್ಮ ಪಕ್ಷದ ಮಾಜಿ ಸಹೋದ್ಯೋಗಿ ದೇವೇಂದರ್ ಸಿಂಗ್ ರಾಣಾ ಅವರನ್ನು ಬೆಂಬಲಿಸಿದ್ದಾರೆ.

ಬನಿ ವಿಧಾನಸಭಾ ಕ್ಷೇತ್ರಕ್ಕೆ ಎನ್‌ಸಿಯ ಉಸ್ತುವಾರಿಯಾಗಿದ್ದ ಅಜೀಜ್ ಅವರು ತಮ್ಮ ಬೆಂಬಲಿಗರೊಂದಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ನಾನು 45 ವರ್ಷಗಳ ಕಾಲ ಕಾಂಗ್ರೆಸ್ಸಿನಲ್ಲಿದ್ದೆ. ದೇವೇಂದರ್‌ ಸಿಂಗ್‌ ರಾಣಾ ಅವರಿಂದಾಗಿ ಮಾತ್ರ ನ್ಯಾಷನಲ್ ಕಾನ್ಫರೆನ್ಸ್‌ ಸೇರಿದ್ದೆ. ಅವರು ಜಮ್ಮುವಿನ ಏಳಿಗೆಗಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿದೆ. ನಾನು ಅವರ ಉದ್ದೇಶವನ್ನು ನಿಸ್ಸಂದೇಹವಾಗಿ ಬೆಂಬಲಿಸುತ್ತೇನೆ’ ಎಂದು ಅಜೀಜ್ ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: