ಕರ್ನಾಟಕಪ್ರಮುಖ ಸುದ್ದಿ

ಸಮವಸ್ತ್ರ ಧರಿಸಿ ಎಣ್ಣೆ ಪಾರ್ಟಿ : ಪೊಲೀಸ್ ಸಿಬ್ಬಂದಿ ಗಳು ಅಮಾನತು

ರಾಜ್ಯ(  ಹಾಸನ),ಅ.19:- ಪೊಲೀಸ್ ಸಮವಸ್ತ್ರ ಧರಿಸಿ ಎಣ್ಣೆ ಪಾರ್ಟಿ ಮಾಡಿದ್ದ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಎಎಸ್‌ ಐ ರಂಗಸ್ವಾಮಿ ಮತ್ತು ಹೆಡ್ ಕಾನ್ಸ್ಟೇಬಲ್ ರಾಮೇಗೌಡ ಅವರನ್ನು ಅಮಾನತುಗೊಳಿಸಿ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಆದೇಶಿಸಿದ್ದಾರೆ.

ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯ ಸಿಬ್ಬಂದಿಗಳಾಗಿರುವ ಇವರಿಬ್ಬರು, ಸಮವಸ್ತ್ರದಲ್ಲೇ ಎಣ್ಣೆ ಪಾರ್ಟಿ ಮಾಡಿದ್ದರು. ಇದರ ವಿಡಿಯೋ ಕೂಡ ವೈರಲ್ ಆಗಿತ್ತು. ಇದೀಗ ಎಸ್ ಪಿ ಇಬ್ಬರನ್ನೂ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: