ಮೈಸೂರು

ಅಕ್ಟೋಬರ್ 20ರಂದು `ಮಿದುಳಿನ ಆಘಾತ-ವಾಸ್ತವಾಂಶಗಳು’ ಕೃತಿ ಬಿಡುಗಡೆ

ಮೈಸೂರು, ಅ.19:- ಬೆಂಗಳೂರಿನ ಬ್ರೈನ್ಸ್ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ಖ್ಯಾತ ನ್ಯೂರೋ ಸರ್ಜನ್‍ರಾದ ಡಾ. ಎನ್.ಕೆ. ವೆಂಕಟರಮಣರವರ ಬ್ರೈನ್ ಅಟ್ಯಾಕ್ ಪ್ಯಾಕ್ಟ್ & ರಿಯಲಿಟಿಸ್ ಕೃತಿಯ ಕನ್ನಡ ಅವತರಣಿಕೆ `ಮಿದುಳಿನ ಆಘಾತ-ವಾಸ್ತವಾಂಶಗಳು’ ಎಂಬ ಕೃತಿಯನ್ನು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ 20.10.2021 ಬುಧವಾರ ಬೆಳಗ್ಗೆ 11 ಘಂಟೆಗೆ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಬಿಡುಗಡೆಗೊಳಿಸಲಿದ್ದಾರೆ.
`ಮಿದುಳಿನ ಆಘಾತ’ (ಸ್ಟ್ರೋಕ್, ಪಾರ್ಶ್ವವಾಯು) ಭಾರತದ ಸಾಮಾನ್ಯ ನ್ಯೂರೋ ಕಾಯಿಲೆಯಾಗಿದೆ. ಪ್ರತಿವರ್ಷ ಇದಕ್ಕೆ 20 ಲಕ್ಷಕ್ಕೂ ಹೆಚ್ಚಿನ ಜನ ತುತ್ತಾಗುತ್ತಿದ್ದಾರೆ. ಡಾ. ಎನ್.ಕೆ. ವೆಂಕಟರಮಣರವರು ಶ್ರೀಸಾಮಾನ್ಯರಿಗೆ ಈ ಕಾಯಿಲೆಯನ್ನು ತಿಳಿಸಲು ಅತ್ಯಂತ ಸರಳವಾದ ಭಾಷೆಯಲ್ಲಿ ಈ ಕೃತಿ ರಚಿಸಿದ್ದಾರೆ. ಅದನ್ನು ಅಷ್ಟೇ ಅಚ್ಚುಕಟ್ಟಾಗಿ ಶ್ರೀ ವೆಂಕಟೇಶ ಪ್ರಸಾದ್‍ರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಂಗಳೂರಿನ ಸಪ್ನ ಬುಕ್‍ಹೌಸ್‍ನಿಂದ ಇದು ಪ್ರಕಟವಾಗಿದೆ. ಇದೇ ಅಕ್ಟೋಬರ್ 29ರಂದು ವಿಶ್ವ ಆರೋಗ್ಯ ಸಂಸ್ಥೆ ಇಂಟರ್ ನ್ಯಾಷನಲ್ ಸ್ಟ್ರೋಕ್ ಡೇ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಟ್ರೋಕ್‍ಗೆ ಸಂಬಂಧಪಟ್ಟ ಗ್ರಂಥ ಕನ್ನಡದಲ್ಲಿ ಪ್ರಕಟವಾಗಿದ್ದು, ಲೋಕಾರ್ಪಣೆಗೊಳ್ಳುತ್ತಿದೆ.
ಕಾರ್ಯಕ್ರಮದಲ್ಲಿ ಡಾ. ಎನ್.ಕೆ. ವೆಂಕಟರಮಣ, ಅನುವಾದಕರಾದ ಬಿ.ಎಸ್. ವೆಂಕಟೇಶ್ ಪ್ರಸಾದ್, ಕೃತಿಯ ಸಂಪಾದಕರಾದ ಡಾ. ಕೆ.ಆರ್. ಕಮಲೇಶ, ಎಂ.ಕೆ. ಶಿವಶಂಕರ್ ಹಾಗೂ ಪ್ರಕಾಶನದ ಪರವಾಗಿ ದೊಡ್ಡೇಗೌಡರು ಭಾಗವಹಿಸಲಿದ್ದಾರೆ.

Leave a Reply

comments

Related Articles

error: