ಮೈಸೂರು

ಪ್ರಥಮ ಪಿಯುಸಿ ಪ್ರವೇಶಾತಿಗೆ ವಿಧಿಸಿರುವ ದಂಡ ಶುಲ್ಕ  ಕೈಬಿಡಲು ಮರಿತಿಬ್ಬೇಗೌಡ ಆಗ್ರಹ

ಮೈಸೂರು,ಅ.20:- 2021-22ನೇ ಸಾಲಿನ ಪ್ರಥಮ ಪಿಯುಸಿ ಪ್ರವೇಶಾತಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಧಿಸಿರುವ ದಂಡ ಶುಲ್ಕ  ಕೈಬಿಡಬೇಕೆಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಕೋವಿಡ್ ನ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ದಂಡಶುಲ್ಕ ರಹಿತವಾಗಿ ಪ್ರವೇಶಾತಿ ನೀಡಬೇಕಾಗಿತ್ತು. ಆದರೆ ಎಸ್.ಸಿ/.ಎಸ್.ಟಿ ಸಾಮಾನ್ಯವರ್ಗವೂ ಸೇರಿದಂತೆ ತಡವಾಗಿ ಪ್ರವೇಶಾತಿ ಪಡೆಯುವವರಿಗೆ 670ರೂ.ದಂಡ ಶುಲ್ಕ, 2,220 ವಿಶೇಷ  ದಂಡ ಶುಲ್ಕ ಸೇರಿದಂತೆ ಒಟ್ಟು 2,890 ಪಾವತಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿರುವುದು ದುರದೃಷ್ಟಕರ. ದಂಡ ಶುಲ್ಕ ವಿಧಿಸದೇ ಪ್ರವೇಶಾತಿ ನೀಡಬೇಕು. ಈಗಾಗಲೇ ಪಾವತಿಸಿದ ವಿದ್ಯಾರ್ಥಿಗಳಿಗೆ ಸದರಿ ಮೊತ್ತ ಮರುಪಾವತಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: