ಮೈಸೂರು

 ಅಶೋಕಪುರಂನ ವಾರ್ಡ್ ನಂಬರ್ 56 ರಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನಾ ಸಭೆ

ಮೈಸೂರು,ಅ.20:- ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 56 ರ ಅಶೋಕಪುರಂ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಸಂಘಟನಾ ಸಭೆ ಅಶೋಕಪುರಂ ನ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ 3ನೇ ಕ್ರಾಸ್ ನ ಶ್ರೀ ಕಾಳಿಕಾಂಬ ದೇವಾಲಯದ ಭವನದಲ್ಲಿ ನಡೆಯಿತು.

ಈ ವೇಳೆ ಮಾಜಿ ಶಾಸಕರಾದ  ಎಂ.ಕೆ. ಸೋಮಶೇಖರ್,ಹಿರಿಯ ಸಾಹಿತಿಗಳು,ವಿಚಾರವಾದಿಗಳು ನಿವೃತ್ತ ಪ್ರಾಂಶುಪಾಲರಾದ   ಸಿದ್ದಸ್ವಾಮಿ,ಕಾಂಗ್ರೆಸ್ ಮುಖಂಡರಾದ  ಜೋಗಿ ಮಹೇಶ್, ಪ್ರಧಾನ ಕಾರ್ಯದರ್ಶಿ ಈಶ್ವರ್ ಚಕ್ಕಡಿ,ಬ್ಲಾಕ್ ಕಾಂಗ್ರೆಸ್ ಸಮಿತಿ  ಅಧ್ಯಕ್ಷರಾದ ಜಿ. ಸೋಮಶೇಖರ್ ಹಾಗೂ ಶ್ರೀಧರ್ ,ಯುವ ಮುಖಂಡರಾದ ಜೈರಾಜ್, ಪಿ.ರಾಜು, ಪ್ರಕಾಶ್ ,ಭಾಸ್ಕರ್ , ಗುಣಶೇಖರ್, ದಾಸು,ದೀನು , ಹರ್ಷ,ಮೋಹನ್, ಸಂತೋಷ್ ಪಿ , ಪೈ ಮಹೇಶ್, ಮಧು, ,ಜಯನಗರ ಕಿಟ್ಟಿ, ಉಪ್ಪಿ ಹಾಗೂ ನೂರಾರು  ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ಇದೇ ವೇಳೆ ಎಐಸಿಸಿ ಆದೇಶದನ್ವಯ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: