ದೇಶಪ್ರಮುಖ ಸುದ್ದಿ

ದೇಶದಲ್ಲಿ ಇಳಿಮುಖವಾಗುತ್ತಿರುವ ಕೊರೋನಾ ಪ್ರಕರಣ : 15 ಸಾವಿರಕ್ಕಿಂತ ಕಡಿಮೆ ಪ್ರಕರಣ ಪತ್ತೆ

ದೇಶ(ನವದೆಹಲಿ)ಅ.20:-  ದೇಶದಲ್ಲಿ ಸತತ ನಾಲ್ಕನೇ ದಿನ, ಕೊರೋನಾ ಸೋಂಕಿತರ ಸಂಖ್ಯೆ 15 ಸಾವಿರಕ್ಕಿಂತ ಕಡಿಮೆ ಕಂಡು ಬಂದಿದೆ.

ಈ ಅಂಕಿ ಅಂಶಗಳು ಹಬ್ಬಗಳಿಗೆ ಮುಂಚಿತವಾಗಿ ಶುಭ ಸೂಚನೆಗಳನ್ನು ನೀಡುತ್ತಿವೆ. ತಜ್ಞರ ಪ್ರಕಾರ, ಇತ್ತೀಚಿನ ಅಂಕಿ ಅಂಶಗಳು ಕೊರೋನಾ ಸೋಂಕು ಕ್ರಮೇಣ ಕಡಿಮೆಯಾಗುತ್ತಿದೆ ಎಂದು ತೋರಿಸುತ್ತಿವೆ, ಈ ಕಾರಣದಿಂದಾಗಿ ಮೂರನೇ ಅಲೆಯ ಸಾಧ್ಯತೆಯೂ ಕಡಿಮೆಯಾಗುತ್ತಿದೆ.

ಬುಧವಾರ ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ  ಕಳೆದ 24 ಗಂಟೆಗಳಲ್ಲಿ 14,623 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ.  ದೇಶದಲ್ಲಿ 19,446 ಮಂದಿ ಚೇತರಿಸಿಕೊಂಡು ತಮ್ಮ ಮನೆಗೆ ಮರಳಿದ್ದಾರೆ. ಆದಾಗ್ಯೂ 197 ಕೊರೋನಾ ಸೋಂಕಿತರು 24 ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ. ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಕೊರೋನಾ ಸೋಂಕಿತರ ಸಂಖ್ಯೆಗಿಂತ ಹೆಚ್ಚುತ್ತಿದೆ. ಜನರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಮಾರ್ಚ್ ನಂತರ ಚೇತರಿಕೆ ದರ 98.15 ಕ್ಕೆ ತಲುಪಿದ್ದು ಇದೇ ಮೊದಲು. ಅದೇ ವೇಳೆ ಒಟ್ಟು  ಪ್ರಕರಣಗಳಲ್ಲಿ ಕೇವಲ 0.52 ಪ್ರತಿಶತ ಮಾತ್ರ ಸಕ್ರಿಯ ಪ್ರಕರಣಗಳು ಕಂಡು ಬಂದಿವೆ.  ಆರೋಗ್ಯ ಇಲಾಖೆಯ ಪ್ರಕಾರ  ದೇಶದಲ್ಲಿ 1,78,098 ಸಕ್ರಿಯ ಕೊರೋನಾ ಪ್ರಕರಣಗಳು ಮಾತ್ರ ಉಳಿದಿವೆ, ಇದು 229 ದಿನಗಳಲ್ಲಿಯೇ ಕಡಿಮೆ.

ಒಟ್ಟು ಸೋಂಕಿತರು 3,41,08,996, ಸಕ್ರಿಯ  ಸಂಖ್ಯೆ 1,78,098, ಮುಖರಾದವರು 3,34,78,247, ಒಟ್ಟು ಸಾವು  4,52,651, ಲಸಿಕೆ ಪಡೆದವರು  99,12,82,283, ಕಳೆದ 24 ಗಂಟೆಗಳಲ್ಲಿ   41,36,142 ಲಸಿಕೆ ನೀಡಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: