ಮೈಸೂರು

ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವಿರುದ್ಧ ಮಲ್ಲೂಪುರ ಗ್ರಾ.ಪಂ.ಅಧ್ಯಕ್ಷರು-ಸದಸ್ಯರ ಅಸಮಾಧಾನ

ಮೈಸೂರು,ಅ.20:- ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಲ್ಲೂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು   ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವಿರುದ್ಧ  ಅಸಮಾಧಾನ ಹೊರ ಹಾಕಿದ್ದಾರೆ.  ಅಷ್ಟೇ ಅಲ್ಲದೆ ಅಧ್ಯಕ್ಷರು, ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಕಾರ್ಖಾನೆಯ ಡಿಸ್ಟಿಲರಿ ಘಟಕ ವಿಸ್ತರಣೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಕಾರ್ಖಾನೆಯಲ್ಲಿ 60 ಕೆಎಲ್ ಡಿಪಿ ಸಾಮರ್ಥ್ಯದ ಡಿಸ್ಟಿಲರಿ ಘಟಕ ಕಾರ್ಯ ನಿರ್ವಹಿಸುತ್ತಿದೆ. ಆದರೆ  ಅದನ್ನು 150 ಕೆಎಲ್ ಡಿಪಿ ಗೆ ವಿಸ್ತರಿಸಲು ಕಾರ್ಖಾನೆ ಮುಂದಾಗಿದೆ. ಕಾರ್ಖಾನೆಯಲ್ಲಿ 60 ಕೆಎಲ್ ಡಿಪಿ  ಸಾಮರ್ಥ್ಯದ ಡಿಸ್ಟಿಲರಿ ಘಟಕದಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದ್ದು 150 ಕೆಎಲ್ ಡಿಪಿ ವಿಸ್ತರಿಸಿದರೆ ಮತ್ತಷ್ಟು ಸಮಸ್ಯೆ ಹೆಚ್ಚಾಗುತ್ತೆ. ಹೀಗಾಗಿ ಡಿಸ್ಟಿಲರಿ ಘಟಕ ವಿಸ್ತರಣೆ ಮಾಡದಂತೆ ಆಗ್ರಹಿಸಿದ್ದಾರೆ.

60 ಕೆಎಲ್ ಡಿಪಿ  ಸಾಮರ್ಥ್ಯದ ಡಿಸ್ಟಿಲರಿ ಘಟಕದಿಂದ ಅಳಗಂಚಿ ಪುರ, ಮಲ್ಲುಪುರ, ಅಳಗಂಚಿ ಗ್ರಾಮ ಸೇರಿ ಹಲವು ಗ್ರಾಮಗಳಲ್ಲಿನ ಜನ, ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಜೊತೆಗೆ ಗ್ರಾಮ ಪಂಚಾಯಿತಿ ಸದಸ್ಯರು ಕೋರ್ಟ್ ಮೊರೆ ಹೋಗಿದ್ದು ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಸೂಚಿಸಿತ್ತು. ಆದರೆ ಕೋರ್ಟ್ ಆದೇಶ ಲೆಕ್ಕಿಸದೆ ಘಟಕ ವಿಸ್ತರಿಸುತ್ತಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ರಾಜೀನಾಮೆ ನೀಡಲು ಗ್ರಾ.ಪಂ. ಸದಸ್ಯರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: