ದೇಶಪ್ರಮುಖ ಸುದ್ದಿ

 100 ಕೋಟಿ ವ್ಯಾಕ್ಸಿನೇಷನ್ ಸಂಭ್ರಮಾಚರಣೆ :  ಡಿಸ್ಪ್ಲೆ ಪಿಕ್ಚರ್ ಬದಲಾಯಿಸಿದ ಪ್ರಧಾನಿ ಮೋದಿ

ದೇಶ(ನವದೆಹಲಿ)ಅ.22:- 100 ಕೋಟಿ ಲಸಿಕೆಗಳ ನೀಡುವ ಐತಿಹಾಸಿಕ ಗುರಿಯನ್ನು ಸಾಧಿಸುವ ಮೂಲಕ ಭಾರತವು ವಿಶ್ವಕ್ಕೆ ಮಾದರಿಯಾಗಿದೆ.

100 ಕೋಟಿ ಡೋಸ್ ಲಸಿಕೆಗಳನ್ನು ನೀಡಿದ ಸಾಧನೆಯ ಮೇಲೆ ದೇಶಾದ್ಯಂತ ಸಂಭ್ರಮಾಚರಣೆಗಳನ್ನು ಆಚರಿಸಲಾಗುತ್ತಿದೆ. ಇದರ ಅಡಿಯಲ್ಲಿ ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ವ್ಯಾಕ್ಸಿನೇಷನ್ಗೆ ಕೊಡುಗೆ ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಲಾಗುತ್ತಿದೆ. ಅದೇ ಸಮಯದಲ್ಲಿ ದೇಶದ ಈ ಸಾಧನೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನ ಡಿಪಿಯನ್ನು (ಡಿಸ್ಪ್ಲೇ) ಬದಲಾಯಿಸಿದ್ದಾರೆ. ಪ್ರಧಾನ ಮಂತ್ರಿ ಭಾರತವನ್ನು ಹೊಸ ಚಿತ್ರ ಅಳವಡಿಸುವ  ಮೂಲಕ ಅಭಿನಂದಿಸಿದ್ದಾರೆ, ಇದರಲ್ಲಿ ಕೊರೋನಾ  100 ಕೋಟಿ ಲಸಿಕೆ  ನೀಡಲಾಗಿದೆ ಎಂದು ಬರೆಯಲಾಗಿದೆ.

ಶುಕ್ರವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 100 ಕೋಟಿ ಲಸಿಕೆ ಪ್ರಮಾಣ ಕೇವಲ ಒಂದು ಅಂಕಿ ಅಲ್ಲ, ಇದು ದೇಶದ ಸಾಮರ್ಥ್ಯದ ಪ್ರತಿಬಿಂಬ ಎಂದು ಹೇಳಿದ್ದಾರೆ. ಇದು ಆ ಹೊಸ ಭಾರತದ ಚಿತ್ರವಾಗಿದ್ದು, ಕಷ್ಟಕರವಾದ ಗುರಿಗಳನ್ನು ಹೊಂದಿವುದು ಮತ್ತು ಅವುಗಳನ್ನು ಸಾಧಿಸುವುದು ಹೇಗೆ ಎಂಬುದನ್ನು ತಿಳಿದಿದೆ ಮತ್ತು ಅದರ ನಿರ್ಣಯಗಳ ಸಾಧನೆಗೆ ಶ್ರಮಿಸುತ್ತದೆ.

ನಮ್ಮ ದೇಶವು ಒಂದು ಕಡೆ ತನ್ನ ಕರ್ತವ್ಯವನ್ನು ನಿರ್ವಹಿಸಿದೆ, ಮತ್ತೊಂದೆಡೆ ಅದು ಉತ್ತಮ ಯಶಸ್ಸನ್ನು ಪಡೆದಿದೆ ಎಂದು ಪ್ರಧಾನಿ ಹೇಳಿದ್ದಾರೆ. ಭಾರತವು ನಿನ್ನೆ ಕಠಿಣವಾದ ಆದರೆ ಅಸಾಧಾರಣವಾದ 100 ಕೋಟಿ ಲಸಿಕೆ ಪ್ರಮಾಣದ ಗುರಿ ಸಾಧಿಸಿದೆ. ಈ ಸಾಧನೆಯ ಹಿಂದೆ 130 ಕೋಟಿ ಜನರ ಕರ್ತವ್ಯವಡಗಿದ್ದು ಈ ಯಶಸ್ಸು ದೇಶದ ಪ್ರತಿಯೊಬ್ಬರ ಯಶಸ್ಸಾಗಿದೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: