ಪ್ರಮುಖ ಸುದ್ದಿಮೈಸೂರು

ಮತದಾರರ ನೋಂದಣಿ ಕುರಿತು ಯೂಟ್ಯೂಬ್ ಮೂಲಕವೂ ಜಾಗೃತಿ ಮೂಡಿಸಿದ ಗೋಮಧುಸೂದನ : ಅರ್ಜಿ ಭರ್ತಿ ಕುರಿತು ಮಾಹಿತಿ

ಮೈಸೂರು,ಅ.22:- ಜೂನ್ 2022ರಲ್ಲಿ ವಿಧಾನ ಪರಿಷತ್ ಗೆ ಚುನಾವಣೆ ನಡೆಯಲಿದ್ದು, ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಮತದಾರರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ ಅವರು ಈಗಾಗಲೇ ಮತದಾರರ ನೋಂದಣಿ ಅಭಿಯಾನ ನಡೆಸಿ, ಇದೀಗ ಯೂಟ್ಯೂಬ್ ಮೂಲಕವೂ ಯುವ ಮತದಾರರಲ್ಲಿ ನೋಂದಣಿ ಕುರಿತು ಜಾಗೃತಿ ಮೂಡಿಸುತ್ತಿದ್ದಾರಲ್ಲದೇ, ಯಾವ ರೀತಿ ಅರ್ಜಿಯನ್ನು ಭರ್ತಿ ಮಾಡಬೇಕು ಎಂಬುದನ್ನು ವಿವರಿಸಿದ್ದಾರೆ.

ಯುವಜನತೆಯಲ್ಲಿ ಜಾಗೃತಿ ಮೂಡಿಸುತ್ತಿರುವ ಅವರು  2022ರ ಜೂನ್ ನಲ್ಲಿ ನಡೆಯುವಂತಹ ಚುನಾವಣೆಗೆ 2021ರ ಅಕ್ಟೋಬರ್ 2ರಂದು ಚುನಾವಣಾ ಆಯೋಗ ಮತದಾರರ ನೋಂದಣಿಗೆ ಆದೇಶವನ್ನು ಪ್ರಕಟಿಸಿದೆ. ಅಕ್ಟೋಬರ್ 6ರಿಂದ ನೋಂದಣಿ ಕಾರ್ಯಕ್ರಮ ಪ್ರಾರಂಭವಾಗಿದ್ದು ನವೆಂಬರ್ 6ರವರೆಗೆ ಮೊದಲ ಹಂತದ   ನೋಂದಣಿ ಕಾರ್ಯಕ್ರಮ ನಡೆಯಲಿದೆ. ಅದಾದ ಒಂದು ತಿಂಗಳ ನಂತರದಲ್ಲಿ ಮತ್ತೊಮ್ಮೆ ನೋಂದಣಿಗೆ ಅವಕಾಶವನ್ನು ಮಾಡಿಕೊಡಲಾಗುತ್ತದೆ. ಒಟ್ಟಾರೆ ಈ ನೋಂದಣಿ ಕಾರ್ಯಕ್ರಮ ಜೂನ್ ತಿಂಗಳ ಕೊನೆಯಲ್ಲಿ ನಡೆಯುವ ಚುನಾವಣೆಗೂ ಮುನ್ನ ಅಂದರೆ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಸಲ್ಲಿಸುವ ದಿನಗಳ ತನಕವೂ ಮತದಾರರ ನೋಂದಣಿ ಕಾರ್ಯಕ್ರಮ ನಡೆಯಲಿದೆ.  ಕೆಲವು ಅಭ್ಯರ್ಥಿ ಆಕಾಂಕ್ಷಿಗಳು ಆಯೋಗದ ಸೂಚನೆಗೂ ಮುನ್ನ ಅರ್ಜಿ ನೋಂದಣಿ ಆರಂಭಿಸಿದ್ದರು. ಅದರಲ್ಲಿನ ಅನೇಕ ಅರ್ಜಿ ನಮೂನೆಗಳಲ್ಲಿ ತಪ್ಪು ಮಾಹಿತಿ ಇದೆ. ಜೊತೆಗೆ  ಗೊಂದಲಗಳು ನಿರ್ಮಾಣವಾಗಿತ್ತು. ಅರ್ಜಿ ಭರ್ತಿ ಮಾಡುವಾಗ ಯಾವುದೇ ಗೊಂದಲ ಬೇಡ ಎಂಬ ದೃಷ್ಟಿಯಿಂದ ಸರಿಯಾದ ಮಾಹಿತಿಯನ್ನು ನೀಡಿದ್ದು, ಚುನಾವಣಾ ಆಯೋಗ ಕೇಳಿದ ದಾಖಲೆಗಳು ಏನೇನು? ಯಾವ ರೀತಿ ಅರ್ಜಿ ಭರ್ತಿ ಮಾಡಬೇಕು ಸೇರಿದಂತೆ ಮತದಾರರ ನೋಂದಣಿಯ ಅರ್ಜಿ ನಮೂನೆ 18ರ ಕುರಿತು ವಿವರಿಸಿದ್ದಾರೆ.

ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಯೂಟ್ಯೂಬ್  Graduates Constituency Enrollment Form(Form 18) Video Guide  ಮೂಲಕವೂ ವೀಕ್ಷಿಸಬಹುದಾಗಿದೆ.

Leave a Reply

comments

Related Articles

error: