
ಮೈಸೂರು
ಆಂಜನೇಯಸ್ವಾಮಿ ದೇವಸ್ಥಾನದ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ
ಮೈಸೂರು,ಅ.22:- ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ವಾರ್ಡ್ ನಂ-22 ರ ಆಂಜನೇಯಸ್ವಾಮಿ ದೇವಸ್ಥಾನದ ಕಾಂಪೌಂಡ್ ಗೋಡೆ ನಿರ್ಮಾಣದ 10 ಲಕ್ಷ ರೂ. ಮೊತ್ತದ ಕಾಮಗಾರಿಗೆ ಶಾಸಕರಾದ ಎಲ್.ನಾಗೇಂದ್ರ ಅವರು ವಾರ್ಡ್ ನಂ-22 ರ ಮಹಾನಗರ ಪಾಲಿಕೆ ಸದಸ್ಯರಾದ ನಮ್ರತಾ ರಮೇಶ್ ಅವರ ಉಪಸ್ಥಿತಿಯಲ್ಲಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಸದಸ್ಯರಾದ ಚಿಕ್ಕವೆಂಕಟು, ಮೂಡಾ ಸದಸ್ಯರಾದ ಮಾದೇಶ್, ಮಾಜಿ ಮ.ನ.ಪಾ ಸದಸ್ಯ ಶ್ರೀರಾಮ್, ರಮೇಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜು, ಸಹಾಯಕ ಇಂಜಿನಿಯರ್ ಚಂದ್ರಮೋಹನ್, ಚಾಮರಾಜ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಸೋಮಶೇಖರರಾಜು, ಪ್ರಧಾನ ಕಾರ್ಯದರ್ಶಿ, ರಮೇಶ್, ಬಿ.ಎಲ್.ಎ-1 ದಿನೇಶಗೌಡ, ಚಾಮರಾಜ ಆಶ್ರಯಸಮಿತಿ ಸದಸ್ಯ ಅನೂಜ್ ಸಾರಸ್ವತ್, ಯುವಮೋರ್ಚಾ ಅಧ್ಯಕ್ಷ ಸಚಿನ್, ಲೋಹಿತ್, ಭಾರತೀಯ ಜನತಾ ಪಕ್ಷದ ವಿವಿಧ ಪದಾಧಿಕಾರಿಗಳು, ಸ್ಥಳೀಯ ಮುಖಂಡರುಗಳಾದ ಸುಧಾ ರಾಮಚಂದ್ರ, ನಾರಾಯಣ, ಗೋಪಾಲ, ವೇಣು, ರಾಮಣ್ಣ, ದೇವಸ್ಥಾನದ ಟ್ರಸ್ಟಿಗಳಾದ ನಾಗರಾಜ್, ಸದಾನಂದ, ಸತೀಶ್, ಸೋಮಶೇಖರ್, ಬಸವರಾಜ್, ಸೋಮಣ್ಣ ಮುಂತಾದವರುಗಳು ಹಾಜರಿದ್ದರು. (ಕೆ.ಎಸ್,ಎಸ್. ಎಚ್)