ಮೈಸೂರು

ಹುಣಸೂರು ತಾಲೂಕಿನಲ್ಲಿ ನಡೆದ  ಕೊಲೆ  ಯತ್ನ ಪ್ರಕರಣ : ಆರೋಪಿಗಳಿಗೆ ಜೈಲು ಶಿಕ್ಷೆ

ಮೈಸೂರು,ಅ.23:-  ಹುಣಸೂರು ತಾಲೂಕಿನಲ್ಲಿ ನಡೆದ  ಕೊಲೆ  ಯತ್ನ ಪ್ರಕರಣದ ಆರೋಪಿಗಳಿಗೆ   ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ  ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ವಿವರ

12-02-2013ರಂದು ರಾತ್ರಿ 9.30 ರ ಸಮಯದಲ್ಲಿ ಪಿರಿಯಾಪಟ್ಟಣ ನಿವಾಸಿಗಳಾದ ಭರತ್ ಕುಮಾರ್ ಮತ್ತು ಶರತ್‌ ಕುಮಾರ್‌ ಎಂಬ ಸಹೋದರರು ಮದುವೆ ಮಂಟಪದಲ್ಲಿ ಹೂವಿನ ಅಲಂಕಾರದ ಕೆಲಸ ಮಾಡುತ್ತಿದ್ದರು ಅವರನ್ನು ಪಿರಿಯಾಪಟ್ಟಣದ ಗೋವಿಂದ ಅವರ ಮಗ ರಾಮು, ವೆಂಕಟಾಚಲ ಅವರ ಮಗ ಕಿರಣ್ ಹಾಗೂ ,ಉಸ್ಮಾನ್ ಅವರ ಮಗ ಅಭಿ @ ಸುಲೈಮಾನ್ ಅವರು  ಅಂಗಡಿಯ ಮುಂದೆ ಒಂದು ಆಟೋದಲ್ಲಿ ಬಂದು ಹಳೇ ದ್ವೇಷದಿಂದ ಭರತ್‌ ಕುಮಾರ್‌ ಮತ್ತು ಶರತ್‌ ಕುಮಾರ್‌ ಅವರ ಕೊಲೆ ಮಾಡುವ ಉದ್ದೇಶದಿಂದ ಒಂದು ಕಬ್ಬಿಣದ ರಾಡನ್ನು ತೆಗೆದುಕೊಂಡು ಶರತ್ ಕುಮಾರ್ ಅವರ ತಲೆಗೆ ಹೊಡೆಯಲು ಪ್ರಯತ್ನಿಸಿದ್ದು, ತಕ್ಷಣದಲ್ಲಿ   ಶರತ್‌ ಕುಮಾರ್‌ ತಪ್ಪಿಸಿಕೊಂಡಾಗ ಕಬ್ಬಿಣದ ರಾಡು ಶರತ್ ಕುಮಾರ್ ಅವರ ಬಲಭಾಗದ ದವಡೆಗೆ ಬಿದ್ದು ತೀವ್ರ ಸ್ವರೂಪದ ಗಾಯವಾಗಿತ್ತು.  ಅವರ 3 ಹಲ್ಲುಗಳು ಬಿದ್ದು ಹೋಗಿದ್ದು, ನಂತರ ಆರೋಪಿತರು, ಕಾಲು ಹಾಗೂ ಕೈಗಳಿಂದಲೂ ಸಹ ಶರತ್‌ ಕುಮಾರ್‌ ಅವರಿಗೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಆಪಾದಿತರ ವಿರುದ್ಧ  ಕೊಲೆ ಪ್ರಯತ್ನದ ಪ್ರಕರಣವನ್ನು ದಾಖಲಿಸಿ ಪಿರಿಯಾಪಟ್ಟಣ ಪೊಲೀಸರು ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಆರೋಪಿತರಾದ ರಾಮು,ಕಿರಣ್ ಹಾಗೂ ಅಭಿ @ ಸುಲೈಮಾನ್ ವಿರುದ್ಧ ಹುಣಸೂರು ಪಟ್ಟಣದ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ  ಪಾಟೀಲ್ ಮೋಹನ್ ಕುಮಾರ್ ಭೀಮನಗೌಡ ಅವರು ವಿಚಾರಣೆ ನಡೆಸಿ  ಇವರುಗಳು ತಪ್ಪಿತಸ್ಥರೆಂದು ತೀರ್ಮಾನಿಸಿ, ಆರೋಪಿತರಿಗೆ ತಲಾ 5 ವರ್ಷಗಳ ಸಾದಾ ಸಜೆ ಮತ್ತು ತಲಾ   35,000 ರೂ. ದಂಡವನ್ನು ವಿಧಿಸಿ ಶುಕ್ರವಾರ ತೀರ್ಪು ನೀಡಿರುತ್ತಾರೆ.

ದಂಡದ ಹಣದಲ್ಲಿ 1,05,000 ರೂ. ವನ್ನು ಗಾಯಾಳುವಾದ ಶರತ್‌ ಕುಮಾರ್‌ ಅವರಿಗೆ ಪರಿಹಾರದ ರೂಪದಲ್ಲಿ ಪಾವತಿಸಬೇಕೆಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ  ಕೆ.ಎಂ.ಸಿ.ಶಿವಶಂಕರಮೂರ್ತಿ ವಾದ ಮಂಡಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: