ಮೈಸೂರು

ಕನ್ನಡ ರಾಜ್ಯೋತ್ಸವ ಪ್ರಯುಕ್ತ  ನಾಡು – ನುಡಿ  ಸಂಸ್ಕೃತಿ ವಿಷಯ ಕುರಿತು ಸ್ಪರ್ಧೆ

ಮೈಸೂರು, ಅ.23 :- ಕನ್ನಡ  ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಡು – ನುಡಿ, ಸಂಸ್ಕೃತಿ ಕುರಿತ ವಿಷಯವನ್ನು ಆಯ್ಕೆ ಮಾಡಿಕೊಂಡು ಸುಮಾರು ಮೂರರಿಂದ ನಾಲ್ಕು ನಿಮಿಷಗಳ ಕಾಲ ನಿರರ್ಗಳವಾಗಿ ಬೇರೆ ಭಾಷೆಯ ಪದಗಳನ್ನು ಬಳಸದೆ  ಕನ್ನಡ ಪದಗಳನ್ನೇ ಬಳಸಿ ಮಾತನಾಡುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಆಸ್ತಕರು ತಾವು ಮಾತನಾಡಿರುವ ವಿಡಿಯೋ ( ಸ್ವಯಂ ಚಿತ್ರೀಕರಣ )ಗಳನ್ನು ಸೆರೆಹಿಡಿದು ಕಳುಹಿಸಬೇಕು. ಅವುಗಳನ್ನು ಪರಿಶೀಲಿಸಿ ಅತ್ಯುತ್ತಮ ಸ್ಪರ್ಧಿಗಳಿಗೆ ಜಿಲ್ಲಾ ಹಂತದಲ್ಲಿ ಮೊದಲನೆಯ ಬಹುಮಾನ (ರೂ.5,000). ಎರಡನೆಯ ಬಹುಮಾನ (ರೂ.3,000). ಮೂರನೆಯ ಬಹುಮಾನ (ರೂ.2,000 ). ಗಳನ್ನು ನೀಡಲಾಗುವುದು.

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೊದಲ ಬಹುಮಾನ ವಿಜೇತರಿಗೆ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ಆಯೋಜಿಸಿ ಮೊದಲನೆಯ ಬಹುಮಾನ (50,000 ರೂ). ಎರಡನೆಯ ಬಹುಮಾನ (30,000 ರೂ). ಮತ್ತು ಮೂರನೆಯ ಬಹುಮಾನ (20,000 ರೂ). ಗಳನ್ನು ಹಾಗೂ ಪ್ರಮಾಣ ಪತ್ರಗಳನ್ನು ಕೊಟ್ಟು ಗೌರವಿಸುವ ವ್ಯವಸ್ಥೆ ಮಾಡಲಾಗಿದೆ.   ಚಿತ್ರೀಕರಿಸಿರುವ  ದೃಶ್ಯ ಚಿತ್ರಗಳನ್ನು ಅಕ್ಟೋಬರ್ 27 ರೊಳಗೆ  ಮೊಬೈಲ್ ಸಂಖ್ಯೆ 7676017144 ಕ್ಕೆ  ಕಳುಹಿಸಬಹುದು . ಹೆಚ್ಚಿನ ಮಾಹಿತಿಗಾಗಿ   ಕಚೇರಿಯ ದೂರವಾಣಿ ಸಂಖ್ಯೆ :  0821-2513225 ಅನ್ನು ಸಂಪರ್ಕಿಸಬಹುದು  ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಸ್.ಎಂ)

Leave a Reply

comments

Related Articles

error: