ಮೈಸೂರು

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

ಮೈಸೂರು,ಅ.23:-  ಸಂಪ್  ನಿಂದ ನೀರನ್ನು ಹೊರ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಸಾವನ್ನಪ್ಪಿದ ಘಟನೆ   ಜನತಾನಗರದಲ್ಲಿ ನಡೆದಿದೆ.

ಮೃತನನ್ನು ಜನತಾನಗರ ನಿವಾಸಿ ಲೇ. ಎಂ.ಹೆಚ್.ಸಿದ್ದಯ್ಯನವರ  ಪುತ್ರ  ಮೋಹನ್ ಗೌಡ (22)ಎಂದು ಗುರುತಿಸಲಾಗಿದೆ.

ಮನೆಯ  ಸಂಪ್  ನಲ್ಲಿ  ತುಂಬಿದ್ದ ನೀರನ್ನು ಹೊರ ಹಾಕಲು ಮೋಟಾರ್ ಸ್ವಿಚ್ ಆನ್ ಮಾಡಿದಾಗ  ವಿದ್ಯುತ್ ಸ್ಪರ್ಶಿಸಿ, ಆಘಾತಗೊಂಡು ಕಿರುಚಾಡಿದ್ದ. ಆತನ ಕೂಗನ್ನು  ಕೇಳಿ ಮನೆಯಿಲ್ಲಿದ್ದ ತಾಯಿ ಹಾಗೂ ನೆರೆಹೊರೆಯವರು  ಬಂದು ನೋಡುವಷ್ಟರಲ್ಲಿ ತೀವ್ರ ಅಸ್ವಸ್ಥನಾಗಿದ್ದ.  ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.  ಸಮೀಪದ ಆಸ್ಪತ್ರೆಗೆ   ಚಿಕಿತ್ಸೆಗೆ ಕರೆದೊಯ್ಯಲಾಯಿತಾದರೂ  ಚಿಕಿತ್ಸೆ ಫಲಿಸದೆ ಮೋಹನ್ ಗೌಡ ಸಾವನ್ನಪ್ಪಿದ್ದಾನೆ.

ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಂ)

Leave a Reply

comments

Related Articles

error: