ಮೈಸೂರು

ಮೈಸೂರಿನ ಹೈವೇ ಸರ್ಕಲ್ ಬಳಿ ಸರಣಿ ಅಪಘಾತ

ಮೈಸೂರು,ಅ.23:- ಇಂದು ಬೆಳ್ಳಂಬೆಳಿಗ್ಗೆ ಮೈಸೂರಿನಲ್ಲಿ  ಹೈವೇ ಸರ್ಕಲ್ ಬಳಿ ಸರಣಿ ಅಪಘಾತ ನಡೆದಿದೆ. ಮೈಸೂರು-ಬೆಂಗಳೂರು ಮುಖ್ಯರಸ್ತೆಯಲ್ಲಿ ಲಾರಿಗೆ ಆಡಿ ಕಾರೊಂದು ಡಿಕ್ಕಿ ಹೊಡೆದಿದೆ.

ಆಡಿ ಕಾರಿಗೆ ಹಿಂದಿನಿಂದ ಬಂದ ಸ್ಯಾಂಟ್ರೋ ಕಾರು ಡಿಕ್ಕಿ ಹೊಡೆದಿದೆ. ಈ ಸಂದರ್ಭ ಆಡಿ ಕಾರಿನಲ್ಲಿ ಏರ್ ಬ್ಯಾಗ್ ತೆರೆದುಕೊಂಡ ಕಾರಣ ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾನೆ. ಡೀಲರ್ ಎನ್ನಲಾಗುತ್ತಿದ್ದು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಯಾವುದೇ ಅನಾಹುತವಾಗಿಲ್ಲ, ಅವರೆಲ್ಲ ಯಾರು ಎಲ್ಲಿಯವರು ಎನ್ನುವುದು ತಿಳಿದು ಬರಬೇಕಿದೆ. ಅಪಘಾತದಿಂದಾಗಿ ರಸ್ತೆ ಸಂಚಾರದಲ್ಲಿ ಅಡಚಣೆಯುಂಟಾಗಿತ್ತು.

ಸ್ಥಳಕ್ಕೆ ಎನ್ ಆರ್ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಪ್ರಸನ್ನ ಕುಮಾರ್, ಎಎಸ್ ಐ ದಿಲೀಪ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: