ಪ್ರಮುಖ ಸುದ್ದಿಮೈಸೂರು

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಫ್ಘಾನಿಸ್ತಾನಕ್ಕೆ ಕಳಿಸಬೇಕು : ಸಂಸದ ಶ್ರೀನಿವಾಸ್ ಪ್ರಸಾದ್

ಮೈಸೂರು, ಅ.23:- ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಫ್ಘಾನಿಸ್ತಾನಕ್ಕೆ ಕಳಿಸಬೇಕು ಎಂದು  ಸಂಸದ ಶ್ರೀನಿವಾಸ್ ಪ್ರಸಾದ್ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿಂದು ಸಂಸದ ಶ್ರೀನಿವಾಸ್ ಪ್ರಸಾದ್  ಮಾತನಾಡಿ ಉಪ ಚುನಾವಣೆಯಲ್ಲಿ ರಾಜ್ಯ ನಾಯಕರ ಮಾತು ಮಿತಿ ಮೀರಿದೆ. ನಾನು ಪೇಪರ್ ಹಾಗೂ ಟಿವಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ನಾನು ಚುನಾವಣಾ ಕ್ಷೇತ್ರಗಳಿಗೆ ಹೋಗಿಲ್ಲ. ಚುನಾವಣೆಯಲ್ಲಿ ನಾವು ಎರಡು ಕ್ಷೇತ್ರವನ್ನು ಗೆಲ್ಲುತ್ತೇವೆ. ಚುನಾವಣೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಮಾತು ಮಿತಿ ಮೀರಿದೆ ಆಡಳಿತ ಪಕ್ಷಕ್ಕೂ ಜವಾಬ್ದಾರಿ ಇದೆ. ಪ್ರತಿ ಪಕ್ಷಕ್ಕೂ ಒಂದು ಜವಾಬ್ದಾರಿ ಇದೆ. ಪ್ರತಿಪಕ್ಷದ ನಾಯರ ಮಾತು‌ ಮಿತಿ ಮೀರಿದೆ ಎಂದು ಕಿಡಿಕಾರಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜವಾಬ್ದಾರಿ ಮರೆಯಬಾರದು. ಪ್ರಧಾನ ಮಂತ್ರಿಗಳಿಗೆ ಒಂದು ಗೌರವ ಇದೆ ಅವರ ಬಗ್ಗೆ ಈ ರೀತಿಯಲ್ಲಿ ಅವಹೇಳನ ಮಾಡಬಾರದು. ಒಂದು ತಿಂಗಳು ತಾಲಿಬಾನ್ ಗಳ ಜೊತೆಗೆ ಕಳಿಸಿ ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಅಲ್ಲಿನ ಪರಿಸ್ಥಿತಿಯ ಅರಿವಾಗಲಿ.  ಈ ರೀತಿಯ ಹೇಳಿಕೆಗಳಿಂದ ಬಹಳ ನೋವಾಗಿದೆ. ಬೇರೆ ಸಮಯದಲ್ಲಿ ಈ ವಿಚಾರದ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: