ದೇಶಪ್ರಮುಖ ಸುದ್ದಿ

‘ಆತ್ಮನಿರ್ಭರ ಭಾರತ ಸ್ವಯಂಪೂರ್ಣ ಗೋವಾ’ ಫಲಾನುಭವಿಗಳೊಂದಿಗೆ ಪ್ರಧಾನಿ ಮಾತುಕತೆ

ದೇಶ(ನವದೆಹಲಿ)ಅ.23:- ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ‘ಆತ್ಮನಿರ್ಭರ ಭಾರತ ಸ್ವಯಂಪೂರ್ಣ ಗೋವಾ’ ಫಲಾನುಭವಿಗಳೊಂದಿಗೆ   ವಿಡಿಯೋ ಕಾನ್ಪ್ರೆನ್ಸಿಂಗ್ ಮೂಲಕ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ ಸ್ವಯಂಪೂರ್ಣ ಗೋವಾ ಯೋಜನೆಯು ಗೋವಾ ತಂಡದ ಸಾಂಘಿಕ ಮನೋಭಾವದ ಫಲವಾಗಿದೆ ಎಂದು ಹೇಳಿದರು. ಗೋವಾದಲ್ಲಿ ಈ ಹಿಂದೆ ರಾಜಕೀಯ ಅಸ್ಥಿರತೆ ಇತ್ತು, ಇದರಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗಿತ್ತು, ಆದರೆ ಇಲ್ಲಿನ ಬುದ್ಧಿವಂತ ಜನರು ರಾಜ್ಯದ ಅಸ್ಥಿರತೆಯನ್ನು ಸ್ಥಿರತೆಗೆ ಪರಿವರ್ತಿಸಿದ್ದಾರೆ ಎಂದು ಅವರು ಹೇಳಿದರು.

ಗೋವಾದಲ್ಲಿ ಅಭಿವೃದ್ಧಿಪಡಿಸುತ್ತಿರುವ ಮೂಲಸೌಕರ್ಯವು ಇಲ್ಲಿನ ಜನರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ವರ್ಷ ಗೋವಾ  ಫಂಡ್  ಐದು ಪಟ್ಟು ಹೆಚ್ಚಾಗಿದೆ. ಗೋವಾದ ಗ್ರಾಮೀಣ ಅಭಿವೃದ್ಧಿಗೆ 500 ಕೋಟಿಗಳನ್ನು ನೀಡಲಾಗಿದೆ.   ಕೇಂದ್ರ ಸರ್ಕಾರವು ಮಹಿಳೆಯರ ಅನುಕೂಲಕ್ಕಾಗಿ ಮತ್ತು ಗೌರವಕ್ಕಾಗಿ   ಮಾಡಿದ ಯೋಜನೆಗಳು ಗೋವಾ  ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದು ಅವುಗಳನ್ನು ವಿಸ್ತರಿಸುತ್ತಿದೆ. ಶೌಚಾಲಯವಿರಲಿ, ಉಜ್ವಲ ಗ್ಯಾಸ್ ಸಂಪರ್ಕವಿರಲಿ ಅಥವಾ ಜನ್ ಧನ್ ಬ್ಯಾಂಕ್ ಖಾತೆಯಾಗಲಿ, ಮಹಿಳೆಯರಿಗೆ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸುವಲ್ಲಿ ಗೋವಾ ಉತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: