ದೇಶಪ್ರಮುಖ ಸುದ್ದಿಮನರಂಜನೆ

“ಕೌನ್ ಬನೇಗಾ ಕರೋಡ್ ಪತಿ” ಶೋನಲ್ಲಿ 25ಲಕ್ಷರೂ.ಗೆದ್ದ ದಿಗ್ಗಜ ಗಾಯಕರು

ದೇಶ(ಮುಂಬೈ)ಅ.23:- ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿಯ ಸೀಸನ್ 13 ಕಮಾಲ್ ಸೃಷ್ಟಿಸುತ್ತಿದೆ.

ಕಾರ್ಯಕ್ರಮವನ್ನು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದು, ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ಸಿಗುತ್ತಿದೆ.   ಇಲ್ಲಿಯವರೆಗೆ ಇಬ್ಬರು ಸ್ಪರ್ಧಿಗಳು ಕೋಟ್ಯಾಧಿಪತಿಗಳಾಗಿದ್ದರೆ, ಉಳಿದ ಸ್ಪರ್ಧಿಗಳು ಕೂಡ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಲಕ್ಷ, ಕೋಟಿ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಕೌನ್ ಬನೇಗಾ ಕರೋಡ್ ಪತಿಯ ಶೋ   ಪ್ರತಿ ಶುಕ್ರವಾರವು ತುಂಬಾ ವಿಶೇಷವಾಗಿರುತ್ತದೆ ಯಾಕೆಂದರೆ  ಕೆಲವು ಸೆಲೆಬ್ರಿಟಿಗಳು   ಶುಕ್ರವಾರದಂದು ಅದರಲ್ಲಿ ಪಾಲ್ಗೊಳ್ಳುತ್ತಾರೆ. ಇತ್ತೀಚೆಗೆ ಶುಕ್ರವಾರದ ಸಂಚಿಕೆಯಲ್ಲಿ ಸಂಗೀತ ಲೋಕದ ಇಬ್ಬರು ದಿಗ್ಗಜ ಗಾಯಕರಾದ ಶಾನ್ ಮತ್ತು ಸೋನು ನಿಗಮ್ ಕಾಣಿಸಿಕೊಂಡಿದ್ದರು.

ಗಾಯಕರಾದ ಶಾನ್ ಮತ್ತು ಸೋನು ನಿಗಮ್  ‘ಓಂ ಶಾಂತಿ ಓಂ’ ಶೀರ್ಷಿಕೆ ಗೀತೆಯನ್ನು ಹಾಡುತ್ತಾ ಕಾರ್ಯಕ್ರಮವನ್ನು ಪ್ರವೇಶಿಸಿದರು. ಇದರ ನಂತರ ಬಿಗ್ ಬಿ  ಅಮಿತಾಬ್ ಬಚ್ಚನ್ ಅವರ ‘ದೇಖಾ ನಾ ಹಾಯ್  ರೇ ಸೋಚಾ ನಾ’ ಮತ್ತು ‘ಕಬ್ ತಕ್ ಮುಝೇ’ ಮುಂತಾದ ಅತ್ಯುತ್ತಮ ಹಾಡುಗಳಿಗೆ ಹಾಡಿದರು. ಶಾನ್ ಮತ್ತು ಸೋನು ನಿಗಮ್ ಕಾರ್ಯಕ್ರಮದಲ್ಲಿ ಮೋಜು-ಮಸ್ತಿ  ಮಾಡಿದರು. ಇಬ್ಬರೂ ಗಾಯಕರು 25 ಲಕ್ಷ ರೂಪಾಯಿ ಗೆಲ್ಲುವ ಮೂಲಕ ಈ ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ. ಆದಾಗ್ಯೂ, ಅವರು 25 ಲಕ್ಷ ಮೊತ್ತವನ್ನು ಗೆಲ್ಲಲು ಲೈಫ್ ಲೈನ್ ಸಹಾಯವನ್ನು ತೆಗೆದುಕೊಳ್ಳಬೇಕಾಗಿ ಬಂತು. ವಿಶ್ವದ ಮೊದಲ ಮಲೇರಿಯಾ ಲಸಿಕೆ ಹೆಸರೇನು ಎಂಬುದಾಗಿತ್ತು. ಲೈಫ್ ಲೈನ್ ಮೂಲಕ ಮಾಸ್ಕ್ಯುರಿಕ್ಸ್ ಉತ್ತರವನ್ನು ಲೈಫ್ ಲೈನ್ ಮೂಲಕ ಪಡೆದರು.  ಶಾನ್ ಮತ್ತು ಸೋನು ನಿಗಮ್ ಗೆದ್ದ ಹಣವನ್ನು ಸಂತ ಬಾಬಾ ಮೋನಿ ಆನಂದ್ ಆಶ್ರಮಕ್ಕೆ ನೀಡಲಿದ್ದಾರೆ. ಈ ಟ್ರಸ್ಟ್ ಅನ್ನು ಅಶೋಕ್ ಖೋಸ್ಲಾ ನಡೆಸುತ್ತಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: