ಮೈಸೂರು

ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವಹೇಳನಕಾರಿ ಹೇಳಿಕೆ : ಬಿಜೆಪಿ ಖಂಡನೆ

ಮೈಸೂರು,ಅ.23:-  ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರ ಹೇಳಿಕೆಯನ್ನು  ಭಾರತೀಯ ಜನತಾ ಪಕ್ಷವು ಖಂಡಿಸಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸೋಮಸುಂದರ ವಿ .ಮಾತನಾಡಿ ಭಾರತೀಯ ಜನತಾ ಪಾರ್ಟಿಯಲ್ಲಿ ಅಧ್ಯಕ್ಷರಿಗೆ ವಿಶೇಷವಾದ ಗೌರವವನ್ನು ನಮ್ಮ ಕಾರ್ಯಕರ್ತರು ನೀಡುತ್ತಾರೆ. ಆ ರೀತಿ ಕೋಟ್ಯಂತರ ಕಾರ್ಯಕರ್ತರ ಗೌರವ ಪಡೆದಿರುವ ನಮ್ಮ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರನ್ನು ಅಸಂಬದ್ಧ ಹೇಳಿಕೆಗಳಿಂದ ಟೀಕಿಕಸುವುದನ್ನು ಲಕ್ಷಣ್ ಅವರು ನಿಲ್ಲಿಸಬೇಕು . ಲಕ್ಷಣ್ ಅವರ ಹೇಳಿಕೆ ಗಮನಿಸಿದರೆ ಅಕ್ರಮ ಸಂಬಂಧಗಳಿಗೆ ಇವರೇ ಮಧ್ಯಸ್ಥಿಕೆ ವಹಿಸಿದ್ದರೆಂಬ ರೀತಿಯಲ್ಲಿ ಹೇಳಿಕೆಯನ್ನು ನೀಡುತ್ತಿರುವುದು ಖಂಡನೀಯ ಎಂದರು.

ನಳೀನ್ ಕುಮಾರ್ ಕಟೀಲ್  ಅವರು ರಾಹುಲ್ ಗಾಂಧಿಯನ್ನು ಡ್ರಗ್ ವ್ಯಸನಿ ಎಂದಿರುವುದರಲ್ಲಿ ಯಾವುದೇ ತಪ್ಪಿಲ್ಲ . ಲಕ್ಷಣ್ ಅವರು ಇನ್ನೂ ರಾಜಕೀಯ ನೆಲೆಯನ್ನು ಕಂಡುಕೊಳ್ಳಲು ಪರಿತಪಿಸುತ್ತಿರುವ ಸಂದರ್ಭದಲ್ಲಿ ಸಾಲು ಸಾಲು ಸಂಘಸಂಸ್ಥೆಗಳ ಮುಖಾಂತರ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಹಿಂದಿನ ಪತ್ರಿಕೆಗಳು ಮತ್ತು ಟಿ,ವಿ , ತುಣುಕನ್ನು ನೋಡುವ ಅಭ್ಯಾಸವಿದ್ದರೆ ನೋಡಲಿ. ಅಂದಿನ ಪ್ರಧಾನ ಮಂತ್ರಿಯಾದಂತಹ ಅಟಲ್ ಬಿಹಾರಿ ವಾಜಪೇಯಿ ಅವರು ವಿದೇಶದಲ್ಲಿ ಡ್ರಗ್ ಸಮೇತ ಸಿಕ್ಕಿಬಿದ್ದಂತಹ ರಾಹುಲ್ ಗಾಂಧಿಯವರನ್ನು ಬಿಡಿಸಲು ಸಹಾಯ ಮಾಡಿದ್ದಾರೆಂಬುದನ್ನು ಪತ್ರಿಕೆಗಳ ಮುಖಾಂತರ ತಿಳಿದುಕೊಳ್ಳಲಿ. ಆ ವಿವಾದವನ್ನು ಪ್ರಸ್ತಾಪಿಸಿದ್ದಾರೆಯೇ ಹೊರತು ಯಾವುದೇ ಸುಳ್ಳು ಆರೋಪವನ್ನು ಹೊರಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರು ಮೋದಿ ಹಾಗೂ ಬಿಜೆಪಿಯನ್ನು ಅವಹೇಳನಕಾರಿ ಹೇಳಿಕೆಗಳಿಂದ  ನಿಂದಿಸಿದರೆ, ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಸಿಗುತ್ತದೆಯೆಂಬ ಭ್ರಮೆಯಲ್ಲಿದ್ದಾರೆ.  ಈ ರೀತಿ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಿ ಟೀಕಿಸಿ ಕರ್ನಾಟಕದಲ್ಲಿ ಒಂದು ಸೀಟ್ ಗೆ ಇಳಿದಿದ್ದೀರಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಬೇಕೆಂಬ ಆಸೆಯಿದ್ದರೆ ಇದೇ ರೀತಿ ಟೀಕಿಸುತ್ತಿರಿ. ಲಕ್ಷಣ್ ಅವರ ಈ ಹೇಳಿಕೆಯನ್ನು ಖಂಡಿಸಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ   ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಧೀರಜ್ ಪ್ರಸಾದ್,   ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ  ಜಯಶಂಕರ್, ನಗರ ಯುವ ಮೋರ್ಚಾ ಅಧ್ಯಕ್ಷರಾದ ಕಿರಣ್ ಗೌಡ , ಮಾಧ್ಯಮ ಸಂಚಾಲಕ ಎಂ.ಎಸ್.ಮಹೇಶ್ ರಾಜೇ ಅರಸ್, ಸಹ ಸಂಚಾಲಕ ಪ್ರದೀಪ್ ಕುಮಾರ್.ಎಸ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಂ)

Leave a Reply

comments

Related Articles

error: