ಕರ್ನಾಟಕಪ್ರಮುಖ ಸುದ್ದಿ

ಜಿಲ್ಲೆಯಲ್ಲಿಂದು ಹೊಸದಾಗಿ 25 ಕೋವಿಡ್ ಪ್ರಕರಣಗಳು ಪತ್ತೆ

ರಾಜ್ಯ(ಹಾಸನ) ಅ.23 :-ಜಿಲ್ಲೆಯಲ್ಲಿಂದು ಹೊಸದಾಗಿ 25 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು,. ಕಳೆದ ವರ್ಷದ ಪ್ರಾರಂಭದಿಂದ ಸೇರಿದಂತೆ ಒಟ್ಟಾರೆ ಸೋಂಕಿತರ ಸಂಖ್ಯೆ 111573 ಕ್ಕೆ ಏರಿಕೆಯಾಗಿದೆ.

2021 ಮಾರ್ಚ್ 22 ರಿಂದ ಇದುವರೆಗೆ ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 82251 ಆಸ್ಪತ್ರೆಯಿಂದ ಇಂದು 26 ಮಂದಿ ಬಿಡುಗಡೆ ಹೊಂದಿರುವವರು ಸೇರಿದಂತೆ ಒಟ್ಟು 110003 ಮಂದಿ ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 202 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 7 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ 1368 ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ 25 ಕೋವಿಡ್ ಪ್ರಕರಣಗಳಲ್ಲಿ ಆಲೂರು ತಾಲ್ಲೂಕಿನಲ್ಲಿ 02 ಮಂದಿ, ಅರಕಲಗೂಡು ತಾಲ್ಲೂಕಿನಲ್ಲಿ 02 ಮಂದಿ, ಅರಸೀಕೆರೆ ತಾಲ್ಲೂಕಿನಲ್ಲಿ 01 ಮಂದಿ, ಬೇಲೂರು ತಾಲ್ಲೂಕಿನಲ್ಲಿ 01 ಮಂದಿ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 6 ಮಂದಿ, ಹಾಸನ ತಾಲ್ಲೂಕಿನಲ್ಲಿ 7 ಮಂದಿ, ಹೊಳೆನರಸೀಪುರ ತಾಲ್ಲೂಕು 01 ಮಂದಿ, ಸಕಲೇಶಪುರ ತಾಲ್ಲೂಕಿನಲ್ಲಿ 4 ಮಂದಿ, ಇತರೆ ಜಿಲ್ಲೆಯಲ್ಲಿ 01 ಮಂದಿಗೆ ಕೋವಿಡ್ ದೃಡಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಅವರು ತಿಳಿಸಿದ್ದಾರೆ.
(ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: