ಮೈಸೂರು

ಪೈಲ್ಸ್ ಚಿಕಿತ್ಸೆಗೆಂದು ಪತ್ನಿ ಹಣ ಕೇಳಿದ್ದಕ್ಕೆ ಗಲಾಟೆ : ಪತಿ ಆತ್ಮಹತ್ಯೆ

ಮೈಸೂರು,ಅ.24:- ಪೈಲ್ಸ್ ಚಿಕಿತ್ಸೆಗೆಂದು ಪತ್ನಿ ಹಣ ಕೇಳಿದ್ದಕ್ಕೆ ಪತಿ-ಪತ್ನಿಯ ನಡುವೆ ಗಲಾಟೆ ನಡೆದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದೆ.
ಮೃತನನ್ನು ಎಲ್.ಐ.ಸಿ.ಏಜೆಂಟ್ ಫ್ರಾಂಕ್ ವಿನೋದ್(46) ಎಂದು ಗುರುತಿಸಲಾಗಿದೆ. ಈತ ಕುಡಿತದ ಚಟಕ್ಕೆ ಬಿದ್ದಿದ್ದ. ದುಡಿದ ಹಣವೆಲ್ಲಾ ಖರ್ಚು ಮಾಡುತ್ತಿದ್ದ. ಈ ನಡುವೆ ಪೈಲ್ಸ್ ನಿಂದ ಬಳಲುತ್ತಿದ್ದ ಪತ್ನಿ ಚಿಕಿತ್ಸೆಗಾಗಿ ಹಣ ಕೇಳಿದ್ದಾರೆ. ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿದೆ. ಇದರಿಂದ ಮನನೊಂದ ಫ್ರಾಂಕ್ ವಿನೋದ್ ಕುಡಿದ ಮತ್ತಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಎನ್ನಲಾಗಿದೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: