ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಟೀಮ್ ಇಂಡಿಯಾಗೆ ಆರಂಭಿಕ ಆಘಾತ : ಮೂರು ವಿಕೆಟ್ ಪತನ

ವಿದೇಶ(ದುಬೈ)ಅ.24:-ಇಂದು ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕ್ ನಡುವಿನ ಬಹುನಿರೀಕ್ಷಿತ ಟಿ-20 ವಿಶ್ವಕಪ್ ಮೊದಲ ಮ್ಯಾಚ್ ನಡೆಯುತ್ತಿದೆ.

ಪಾಕಿಸ್ತಾನ ಟಾಸ್ ಗೆದ್ದು ಈಗಾಗಲೇ ಫೀಲ್ಡಿಂಗ್ ಆಯ್ದುಕೊಂಡಿದೆ. ಟಾಸ್ ಸೋತರೂ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಮೊದಲು
ಬ್ಯಾಟಿಂಗ್ ಇಳಿದಿದೆ.
ಟೀಮ್ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿದೆ. ಭಾರತದ ಪರವಾಗಿ ಓಪನರ್ ಆಗಿ ಕೆ.ಎಲ್ ರಾಹುಲ್
ಮತ್ತು ರೋಹಿತ್ ಶರ್ಮಾ ಕ್ರೀಸ್‌ಗಿಳಿದರು. ಮೊದಲ ಓವರ್
ನಲ್ಲೇ ರೋಹಿತ್ ಮೊದಲ ಬಾಲ್‌ಗೆ ಔಟಾದರು. ಈ ಬೆನ್ನಲ್ಲೇ
ಕೆ.ಎಲ್ ರಾಹುಲ್ ಮೂರು ರನ್ ಗಳಿಸಿ ಔಟಾಗಿದ್ದಾರೆ. ಇದೀಗ ಸೂರ್ಯಕುಮಾರ್ ಯಾದವ್ ಔಟ್ ಆಗಿದ್ದಾರೆ.

Leave a Reply

comments

Related Articles

error: