ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಟೀಮ್ ಇಂಡಿಯಾ ವಿರುದ್ಧ ವಿಕೆಟ್ ನಷ್ಟವಿಲ್ಲದೆ ಭರ್ಜರಿ ಜಯ ಸಾಧಿಸಿದ ಪಾಕ್

ವಿದೇಶ(ದುಬೈ),ಅ.24:- ಇಂದು ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದ ಆರಂಭದಲ್ಲಿಯೇ ಆಘಾತ ನೀಡಿದ ಪಾಕಿಸ್ತಾನ ತಂಡ ಭಾರತದ ವಿರುದ್ಧ ಭರ್ಜರಿ
ಜಯ ಸಾಧಿಸಿದೆ.

ಭಾರತ ನೀಡಿದ ಟಾರ್ಗೆಟ್ ಬೆನ್ನತ್ತಿದ ಪಾಕ್ ಒಂದು ವಿಕೆಟ್ ನಷ್ಟವಿಲ್ಲದೆ 17.5 ಓವರ್‌ಗಳಲ್ಲಿ 152
ರನ್ ಗಳಿಸುವ ಮೂಲಕ ಗೆಲುವು ಕಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ
ತಂಡ 7 ವಿಕೆಟ್ ನಷ್ಟಕ್ಕೆ 152 ರನ್‌ ಗಳ ಸಾಧಾರಣ ಮೊತ್ತದ
ಟಾರ್ಗೆಟ್ ನೀಡಿತ್ತು. ಕ್ಯಾಪ್ಟನ್ ವಿರಾಟ್ ಕೊಹ್ಲಿ
ಅರ್ಧಶತಕದ ಸಹಾಯದಿಂದ ಆರಂಭದಲ್ಲೇ ಬ್ಯಾಕ್ ಟು
ಬ್ಯಾಟ್ ವಿಕೆಟ್ ಕಳೆದುಕೊಂಡರೂ ಸಹ 151 ರನ್
ಪೇರಿಸಿತ್ತು. ಭಾರತದ ಪರವಾಗಿ ತಾಳ್ಮೆಯ ಆಟವಾಡಿ
ಇನ್ನಿಂಗ್ಸ್ ಕಟ್ಟಿದ ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿ ತಂಡ
ಸಾಧಾರಣ ಮೊತ್ತ ಪೇರಿಸಲು ಕಾರಣರಾದರು.

ಕೆ.ಎಲ್ ರಾಹುಲ್ 3, ವಿರಾಟ್ ಕೊಹ್ಲಿ 57,
ಸೂರ್ಯಕುಮಾರ್ ಯಾದವ್ 11, ರಿಷಬ್ ಪಂತ್ 39,
ರವೀಂದ್ರ ಜಡೇಜಾ 13, ಹಾರ್ದಿಕ್ ಪಾಂಡ್ಯ 11 ರನ್
ಗಳಿಸಿದರು.

Leave a Reply

comments

Related Articles

error: