ಕರ್ನಾಟಕಪ್ರಮುಖ ಸುದ್ದಿ

ಸಿಂಧಗಿ ಉಪಚುನಾವಣೆ : ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಪ್ರಚಾರ

ರಾಜ್ಯ (ವಿಜಯಪುರ) ಅ.25 : ಸಿಂದಗಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಪ್ರಚಾರ ಕೈಗೊಂಡಿದ್ದಾರೆ.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ  ಅವರು  ನಾನು ಇನ್ನೂ ಎರಡು ದಿವಸ ಇಲ್ಲಿಯೇ ಇದ್ದು ಪ್ರಚಾರ ಮಾಡುತ್ತೇನೆ. ಪ್ರಚಾರದಲ್ಲಿ ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನಾನು ಇಷ್ಟು ದಿನ ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಕೇಳುತ್ತೇನೆ ಎಂದು ಹೇಳಿದರು.

ನೀವು ಯಾರ ಬಗ್ಗೆಯೂ ಮಾತನಾಡುತ್ತಿಲ್ಲ.  ಆದರೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ನಿಮ್ಮ  ಬಗ್ಗೆ ಮಾತನಾಡುತ್ತಿವೆ ಎಂದ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ  ಪಕ್ಷವನ್ನು  ಮುಗಿಸಿ ಬಿಡುತ್ತೇವೆ ಎನ್ನುತ್ತಿದ್ದಾರೆ. ಮುಗಿಸುತ್ತಾರೋ ಇಲ್ಲವೋ ಅಂತ ನೋಡೋದಕ್ಕೆ ಬಂದಿದ್ದೇನೆ. ಅವರು ಹಾಗೆ ಹೇಳುತ್ತಿದ್ದಾರೆ. ನಾವು ಉಳಿಸಿಕೊಂಡು ಹೋಗುತ್ತಿದ್ದೇವೆ ಎಂದರು. (ಎಸ್.ಎಂ)

 

Leave a Reply

comments

Related Articles

error: