ಮೈಸೂರು

ವರುಣನ ಆರ್ಭಟಕ್ಕೆ ಪಂಚಗವಿಮಠದ ಕಟ್ಟಡ ಗೋಡೆ ಕುಸಿತ

ಮೈಸೂರು,ಅ.25:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರುಣನ ಆರ್ಭಟಕ್ಕೆ ಪುರಾತನ ಪ್ರಸಿದ್ಧ ಪಂಚಗವಿಮಠದ ಕಟ್ಟಡದ ಗೋಡೆಯೊಂದು ಕುಸಿತಗೊಂಡಿದೆ.

200 ವರ್ಷಗಳ ಇತಿಹಾಸ ಈ ಪಂಚಗವಿಮಠಕ್ಕೆ ಇದೆ. ಪಂಚಗವಿಮಠದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಇದರಿಂದಾಗಿಯೇ  ರಾತ್ರಿ ಸುರಿದ ಧಾರಾಕಾರ ಮಳೆಗೆ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಸುಮಾರು 20 ವಿದ್ಯಾರ್ಥಿಗಳು ಈ ಮಠದಲ್ಲಿ ವಾಸವಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸರಿಯಾದ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆ ತಲುಪಿದೆ ಎನ್ನುವ ಆರೋಪ ಕೇಳಿಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

Leave a Reply

comments

Related Articles

error: