ದೇಶಪ್ರಮುಖ ಸುದ್ದಿಮನರಂಜನೆ

ಸೂಪರ್ ಸ್ಟಾರ್ ರಜಿನಿಕಾಂತ್ ಗೆ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಪ್ರದಾನ

ದೇಶ(ನವದೆಹಲಿ)ಅ.25:-  ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೆ  ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 67ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ  ದಾದಾ ಸಾಹೇಬ್ ಪಾಲಿಕೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಇದೇ ಖುಷಿಯಲ್ಲಿ  ರಜಿನಿಕಾಂತ್ ಮಾತನಾಡಿ ಈ ಪ್ರಶಸ್ತಿಯನ್ನು ನನ್ನ ಗುರುಗಳಾದ ಕೆ.ಬಾಲಚಂದರ್ ಅವರಿಗೆ ಅರ್ಪಿಸುತ್ತೇನೆ. ಅಲ್ಲದೇ ಈ ವೇಳೆ ತಂದೆ ಸ್ಥಾನದಲ್ಲಿ ನಿಂತು ನನ್ನನ್ನು ಬೆಳೆಸಿದ, ಆಧ್ಯಾತ್ಮದಲ್ಲಿ ಆಸಕ್ತಿ ಮೂಡಿಸಿದ ನನ್ನ ಅಣ್ಣ ಸತ್ಯನಾರಾಯಣ್ ಗಾಯಕ್‌ ವಾಡ್ ಹಾಗೂ ಕರ್ನಾಟಕದ ನನ್ನ ಸ್ನೇಹಿತ ಮತ್ತು ಬಸ್ ಚಾಲಕ ರಾಜ್ ಬಹದ್ದೂರ್‌ ಗೆ ಅರ್ಪಿಸುತ್ತೇನೆ. ಅವರು ನನ್ನ ಪ್ರತಿಭೆಯನ್ನು ಗುರುತಿಸಿದ ಮೊದಲ ವ್ಯಕ್ತಿ. ಆರಂಭದಲ್ಲಿ ಅವರು ನನ್ನನ್ನು ಪ್ರೋತ್ಸಾಹಿಸಿದರು ಎಂದು ಹೇಳಿದ್ದಾರೆ. ವಿಶೇಷವೆಂದರೆ ತಮ್ಮ ಭಾಷಣದಲ್ಲಿ ಕೇವಲ ಈ ಮೂವರ ಹೆಸರು ಮಾತ್ರ ಹೇಳಿದ ರಜಿನಿಕಾಂತ್ ಅವರು ತಮಿಳುಜನರಿಗೂ ಧನ್ಯವಾದ ಅರ್ಪಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: